ಪ್ರಭಾವಿ ತಜ್ಞರ ಪಟ್ಟಿಯಲ್ಲಿ ಡಾ. ಶ್ರೀವಲ್ಸ

ಪ್ರಭಾವಿ ತಜ್ಞರ ಪಟ್ಟಿಯಲ್ಲಿ ಡಾ. ಶ್ರೀವಲ್ಸ


ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಇದರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ-ಪ್ರಾಧ್ಯಾಪಕ ಡಾ. ಶ್ರೀವಲ್ಸ ಕೊಳತ್ತಾಯರ್ ಅವರು 2026ನೇ ಸಾಲಿನ ಜಾಗತಿಕ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಗ್ರ 50 ಪ್ರಭಾವಿ ತಜ್ಞರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮೂಲಸೌಕರ್ಯ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಶ್ರಮಿಸುತ್ತಿರುವ ಜಾಗತಿಕ ಸಿವಿಲ್ ಇಂಜಿನಿಯರ್ಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಮಾತ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಆಸ್ಟ್ರೇಲಿಯಾದ ಜೊನ್ನೊ ವೈಟ್ ಅವರು ಜಾಗತಿಕವಾಗಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಎನ್‌ಐಟಿಕೆಯ ಡಾ. ಶ್ರೀವಲ್ಸ ಕೊಳತ್ತಾಯರ್ ಮತ್ತು ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸಂಜಯ್ ಕುಮಾರ್ ಸ್ಥಾನ ಪಡೆದ ತಜ್ಞರು. 

ಡಾ. ಶ್ರೀವಲ್ಸ ಕೊಳತ್ತಾಯರ್ ಅವರನ್ನು ವರ್ಗ 4: ಜಲ, ಪರಿಸರ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ’ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. 

ಈ ವಿಭಾಗದಲ್ಲಿ ವಿಶ್ವದ ಖ್ಯಾತ ತಜ್ಞರಾದ ಪೆಡ್ರೊ ಜೆ.ಜೆ. ಅಲ್ವಾರೆಜ್ (ರೈಸ್ ಯೂನಿವರ್ಸಿಟಿ, ಅಮೆರಿಕ), ಕೋಸ್ಟಾ ಸಮರಸ್ (ಕಾರ್ನೆಗೀ ಮೆಲನ್ ಯೂನಿವರ್ಸಿಟಿ), ದೀಪಕ್ ಗ್ಯಾವಾಲಿ (ನೇಪಾಳ ವಾಟರ್ ಕನ್ಸರ್ವೇಶನ್ ಫೌಂಡೇಶನ್), ಡಾ. ಪ್ರಿಯಾ ಪಾರಿಖ್ (ಇಂಪೀರಿಯಲ್ ಕಾಲೇಜ್ ಲಂಡನ್) ಇದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article