ಇ-ಆಟೋ ಅರ್ಜಿ ಸಲ್ಲಿಸಲು ಸೂಚನೆ
Wednesday, May 13, 2026
ಮಂಗಳೂರು: ಮಂಗಳೂರು ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ (ಕೆಎ-19) ನೋಂದಣಿಗೊಂಡಿರುವ ಎಲ್ಲ ಇಲೆಕ್ಟ್ರಿಕ್ ಆಟೋ ರಿಕ್ಷಾಗಳ ಸಂಖ್ಯೆ 3551 ಆಗಿದ್ದು, ಈ ಪೈಕಿ 2162 ಇ-ಆಟೋ ರಿಕ್ಷಾ ಪರವಾನಿಗಾಗಿ ಅರ್ಜಿಗಳು ಬಂದಿವೆ. 1389 ಇಲೆಕ್ಟ್ರಿಕ್ ಆಟೋ ರಿಕ್ಷಾ ಮಾಲಕರು ಪರವಾನಿಗೆ ಪಡೆಯಲು ಇನ್ನೂ ಅರ್ಜಿ ಸಲ್ಲಿಸಿಲ್ಲ.
ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಲು ಬಾಕಿ ಉಳಿದವರು ತಕ್ಷಣ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಇನ್ನೂ ವಿಳಂಬ ಮಾಡಿದರೆ ಮೋಟಾರು ವಾಹನ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ( ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.