ಇಬ್ರಾಹಿಂ ನವಾಝ್ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಸಭೆ
Tuesday, May 19, 2026
ಮಂಗಳೂರು: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೊಳಿಸುವ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು. ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಬಷೀರ್, ವಿಧಾನ ಸಭಾ ಅಧ್ಯಕ್ಷರಾದ ಹಕೀಮ್ ಕೊಕ್ಕಡ, ನವಾಝ್ ನರಿಂಗಾನ, ಫೈಝಲ್ ಕಡಬ, ಬ್ಲಾಕ್ ಅಧ್ಯಕ್ಷರಾದ ಪೃಥ್ವಿರಾಜ್, ಇಮ್ತಿಯಾಜ್ ಕಲ್ಲಡ್ಕ, ಪ್ರತಾಪ್ ಚಂದ್ರ ಕರ್ಕೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಾಶೀರ್ ಪೆರಿಮಾರ್, ತೇಜಸ್ ಶೆಟ್ಟಿ, ಮಿತೇಶ್, ಫಿರೋಜ್ ಮಲರ್, ಫಯಾಝ್, ರಿತೇಶ್ ಅಂಚನ್, ಬತೀಶ್ ಅತೂರ್, ಮುಖಂಡರಾದ ಸಮರ್ಥ್ ಭಟ್, ಗೋಪಿ ಉಪಸ್ಥಿತರಿದ್ದರು.