ರಾಜ್ಯದಲ್ಲಿ ಸಂಪುಟ ಪುನಾರಚನೆ: ಸಿಎಂ, ವರಿಷ್ಠರಿಗೆ ಬಿಟ್ಟದ್ದು: ಸಚಿವ ಈಶ್ವರ ಖಂಡ್ರೆ

ರಾಜ್ಯದಲ್ಲಿ ಸಂಪುಟ ಪುನಾರಚನೆ: ಸಿಎಂ, ವರಿಷ್ಠರಿಗೆ ಬಿಟ್ಟದ್ದು: ಸಚಿವ ಈಶ್ವರ ಖಂಡ್ರೆ


ಮಂಗಳೂರು: ರಾಜ್ಯದಲ್ಲಿ ಸಂಪುಟ ಪುನಾರಚನೆ ಸಿಎಂ ಮತ್ತು ವರಿಷ್ಠರಿಗೆ ಬಿಟ್ಟದ್ದು, ಅವರು ಮಾಡಬಹುದು, ಮಾಡದೇ ಇರಬಹುದು. ಅವರ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಇಂದು ನಗರದಲ್ಲಿ ಗೇರು ಮೇಳಕ್ಕೆ ಚಾಲನೆ ನೀಡಲು ಆಗಮಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸರಕಾರ ಭದ್ರವಾಗಿದೆ. ಜನಪರ, ಉತ್ತಮ ಆಡಳಿತ ಕೊಟ್ಟಿದ್ದಕ್ಕೆ ಎಲ್ಲ ಚುನಾವಣೆ ಗೆದ್ದಿದ್ದೇವೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಉತ್ತಮ ಆಡಳಿತ ಕೊಡುತ್ತೇವೆ ಎಂದರು.

ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತೇನೆ. ಇಲಾಖೆಯನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದೇನೆ.  ಈಗ ಯಾವ ಹುದ್ದೆಯೂ ಖಾಲಿ ಇಲ್ಲ ಎಂದು ಖಂಡ್ರೆ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article