ಕಲ್ಲಮುಂಡ್ಕೂರು ವ್ಯ.ಸೇ. ಸಹಕಾರಿ ಸಂಘದ ನಿದೇ೯ಶಕರ ಚುನಾವಣೆ: ಬಿಜೆಪಿ ಬೆಂಬಲಿತ 10 ಮಂದಿಗೆ ಗೆಲುವು
ಸಾಮಾನ್ಯ ಕ್ಷೇತ್ರದಲ್ಲಿ ನಾಗರಾಜ್ ಕಾಮತ್, ಮಾರುತಿ ಭಟ್ ಕೆ.ಎಸ್, ವಿದ್ಯಾನಂದ, ಸುಧಾಕರ್, ಮಹಿಳಾ ಕ್ಷೇತ್ರದಲ್ಲಿ ಆಶಾಲತಾ, ವಿಶಾಲಾಕ್ಷಿ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ರತನ್, ಪರಿಶಿಷ್ಠ ಪಂಗಡ ಕ್ಷೇತ್ರದಲ್ಲಿ ಸುಕುಮಾರ್ ನಾಯ್ಕ, ಹಿಂದುಳಿದ (ಬಿ) ಕ್ಷೇತ್ರದಲ್ಲಿ ಜೋಯಿಸನ್ ಪ್ರವೀಣ್ ಡಿಸೋಜ ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಕೇಶವ ಪೂಜಾರಿ ಗೆಲುವು ಸಾಧಿಸಿದ ಅಭ್ಯರ್ಥಿಗಳಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೇಶವ ಪೂಜಾರಿ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಕ್ರೈಸ್ತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಕ್ರೈಸ್ತ ಅಭ್ಯರ್ಥಿ ಜೋಯಿಸನ್ ಪ್ರವೀಣ್ ಡಿಸೋಜ ಭರ್ಜರಿ ಜಯ ದಾಖಲಿಸಿರುವುದು ಗಮನಾರ್ಹವಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುಂದರ ಪೂಜಾರಿ ಮತ್ತು ರಾಜೇಶ್ ಶೆಟ್ಟಿ ಪರಾಭವಗೊಂಡಿದ್ದಾರೆ.
ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್, ಎಂಎಲ್ಎ ಉಮಾನಾಥ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷರಾದ ಶಾಂತಿಪ್ರಸಾದ್ ಹೆಗ್ಡೆ, ಈಶ್ವರ್ ಕಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಭಾಸ್ಕರ ದೇವಸ್ಯ, ಸೊಸೈಟಿ ಮಾಜಿ ಅಧ್ಯಕ್ಷರಾದ ಜೋಕಿಂ ಕೊರೆಯ, ಸ್ಥಳೀಯ ಕ್ರೈಸ್ತ ಬಿಜೆಪಿ ಮುಖಂಡ ಗ್ಲೆನ್ ವಿಶಾಲ್ ಡಿಸಿಲ್ವಾ, ಉಪಸ್ಥಿತರಿದ್ದರು
