ಮೂಡುಬಿದಿರೆ ಮೇ.16ರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಆಂದೋಲನ

ಮೂಡುಬಿದಿರೆ ಮೇ.16ರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಆಂದೋಲನ


ಮೂಡುಬಿದಿರೆ: ಸರ್ಕಾರಿ ಶಾಲೆಗಳಲ್ಲಿ ಮೇ.16  ರಿಂದ ದಿ:28 ರವರೆಗೆ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ದಾಖಲಾತಿ ಆಂದೋಲನ ನಡೆಸಲಾಗುವುದು ಎಂದು ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಪೋಷಕ ಶಿಕ್ಷಕರ ಮಹಾಸಭೆ ನಡೆಸಿ 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಎಲ್ಲಾ ಶಾಲೆಗಳಲ್ಲಿ ಸಭೆ ನಡೆಸಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದಲ್ಲೂ ಚಾಲನೆ ನೀಡಲಾಗಿದೆ.

2026-27 ನೇ ಸಾಲಿನಲ್ಲಿ ಎಲ್ಲಾ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ “ದ್ವಿಭಾಷಾ ಬೋಧನೆ” ಆರಂಭವಾಗಲಿದೆ. ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು ಸರಬರಾಜಾಗುತ್ತಿವೆ. ದಾಖಲಾತಿ ಆಂದೋಲನದ ಬಗ್ಗೆ ತಾಲೂಕು ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ, ಶಾಲಾ ಮಟ್ಟದಲ್ಲಿ ಸಾರ್ವಜನಿಕರು, ಎಸ್.ಡಿ ಎಂ.ಸಿ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು ಸಭೆ ಸೇರಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ದಾಖಲಾತಿ ಆಗುವಂತೆ ಸಾರ್ವಜನಿಕರು ಪ್ರೋತ್ಸಾಹ ಮತ್ತು ಸಹಕಾರ ನೀಡುವಂತೆ ಚರ್ಚಿಸಿ ಪ್ರಚಾರ ಮಾಡುವುದು. , ಜಾಥಾ ನಡೆಸುವುದು, ಮನೆಗಳಿಗೆ, ಅಂಗನವಾಡಿಗಳಿಗೆ ಬೇಟಿ ಮಾಡಿ ಮಕ್ಕಳ ದಾಖಲಾತಿಯನ್ನು ಉತ್ತಮಪಡಿಸುವುದು ಮುಂತಾದ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ಅಲ್ಲದೇ ಶಾಲೆಗಳ ಮಾಹಿತಿ, ಗುಣಮಟ್ಟ, ಸವಲತ್ತುಗಳು ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಕರಪತ್ರ ಮತ್ತು ಬ್ಯಾನ‌ರ್ ಮೂಲಕ ಪ್ರಚಾರ ನೀಡುವುದು. ಮೂಡುಬಿದಿರೆ ತಾಲೂಕಿನಲ್ಲಿ ಒಟ್ಟು ಕಿರಿಯ ಪ್ರಾಥಮಿಕ -15, ಹಿರಿಯ ಪ್ರಾಥಮಿಕ-44, ಸರ್ಕಾರಿ ಪ್ರೌಢ ಶಾಲೆ – 09, ಮೊರಾರ್ಜಿ ಶಾಲೆ -1 (6 ರಿಂದ 10) ಒಟ್ಟು 69 ಸರ್ಕಾರಿ ಶಾಲೆಗಳಿದ್ದು ಅದರಲ್ಲಿ 2+2 ಪಿ ಎಂ ಶ್ರೀ ಶಾಲೆಗಳು, 1- ಕೆಪಿಎಸ್ ಶಾಲೆ ಕಾರ್ಯನಿರ್ವಹಿಸುತ್ತಿವೆ.

ಈ ಬಾರಿ ಮೂಡುಬಿದಿರೆ ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ 99.53% ಫಲಿತಾಂಶ ದಾಖಲಾಗಿರುತ್ತದೆ.

ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯಗಳು: ಸಂಪೂರ್ಣ ಉಚಿತ, ಕಡ್ಡಾಯ ಗುಣಮಟ್ಟದ ಶಿಕ್ಷಣ ನೀಡುವುದು. ಉಚಿತಪಠ್ಯಪುಸ್ತಕ, 2 ಜೊತೆ ಉಚಿತ ಸಮವಸ್ತ್ರ ,ಉಚಿತ ಶೂ ಸಾಕ್ಸ್ ಸೌಲಭ್ಯ, ಮದ್ಯಾಹ್ನ ಬಿಸಿಊಟ ಯೋಜನೆ ಪೂರಕ ಪೌಷ್ಟಿಕ ಆಹಾರ, ಕ್ಷೀರಭಾಗ್ಯ, ಗುಣ ಮಟ್ಟದ ಶಿಕ್ಷಣ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ, ಸ್ಮಾರ್ಟ್ ಕ್ಲಾಸ್, ಎಲ್ಲಾ ಶಾಲೆಗಳಲ್ಲಿ ಇಕೋ ಕ್ಲಬ್ ಚಟುವಟಿಕೆಗಳು, ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ ಕಲಿಕೆ, ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದಲ್ಲಿ ಕಲಿಕೆ, ಕಬ್ಬಿಣಾಂಶದ ಮಾತ್ರೆ ವಿವರಣೆ, 6 ತಿಂಗಳಿಗೊಮ್ಮೆ ಜಂತುಹುಳು ನಿವಾರಣೆ ಮಾತ್ರೆ, ಪೊಲೀಸ್ ಇಲಾಖೆಯಿಂದ ಮಕ್ಕಳ ಸುರಕ್ಷತೆ ಮತ್ತುಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವುದು. ಸುಸಜ್ಜಿತ ಗ್ರಂಥಾಲಯ ಲಭ್ಯತೆ, ಕ್ರೀಡೆ, ಸಾಂಸ್ಕೃತಿಕ ಮತ್ತು ಪ್ರತಿಭಾ ಕಾರಂಜಿಯಂತಹ ಪತ್ಯೇತರ ಚಟುವಟಿಕೆಗಳು.

ಆಯ್ದ ಶಾಲೆಗಳಲ್ಲಿ ಎಲ್ಕೆಜಿ ಯುಕೆಜಿ ಯಿಂದಲೇ ಕಲಿಕೆ ಆರಂಭ, 8 ನೇ ತರಗತಿ ಮಕ್ಕಳಿಗೆ ಎನ್ ಎಂ ಎಂ ಎಸ್ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ವಿದ್ಯಾರ್ಥಿವೇತನ, ಶಿಕ್ಷಕ ಸ್ನೇಹಿ ಕಲಿಕಾ ವಾತಾವರಣ, ಹೆಣ್ಣು ಮಕ್ಕಳಿಗೆ ಉಚಿತ ಕರಾಟೆ ತರಬೇತಿ, ವೃತ್ತಿ ಮಾರ್ಗದರ್ಶನ,9 ನೇ ತರಗತಿಯಿಂದ ಎನ್ ಎಸ್ ಕ್ಯೂ ಎಫ್ ಕೋರ್ಸ್ (ಸರ್ಕಾರಿಶಾಲೆಗಳಲ್ಲಿ ಮಾತ್ರ) ವಿಶೇಷ ಚೇತನ ಮಕ್ಕಳಿಗೆ ಸಮನ್ವಯ ಸಂಪನ್ಮೂಲ ಕೇಂದ್ರದಿಂದ ವಾರಕ್ಕೆ 2 ದಿನ ಫಿಸಿಯೋಥೆರಪಿ ವಾಯ್ಸ್ ಥೆರಪಿ ಚಿಕಿತ್ಸೆ ಸೌಲಭ್ಯ ಸಿಗುತ್ತದೆ. ವರ್ಷಕ್ಕೆ ಎರಡು ಬಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾಲೂಕು ಮಟ್ಟದಲ್ಲಿ ನೀಡಲಾಗುತ್ತದೆ.

ಮೇಲ್ಕಂಡ ಎಲ್ಲಾ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಸಿಗಲಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ತಮ್ಮ ಮನೆಯ ಹತ್ತಿರದಲ್ಲಿರುವ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಿಸುವಂತೆ ಕೋರಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article