ಮೂಡುಬಿದಿರೆ ತಾಲೂಕಿನಲ್ಲಿ ಗಾಳಿ ಮಳೆ: ಮಾಂಟ್ರಾಡಿಯಲ್ಲಿ ಎರಡು ಮನೆಗಳು ಜಖಂ, ಧರೆಗುರುಳಿದ ಮರಗಳು
Thursday, May 14, 2026
ಮೂಡುಬಿದಿರೆ: ತಾಲೂಕಿನಲ್ಲಿ ಗುರುವಾರ ಸಂಜೆ ಬೀಸಿದ ಗಾಳಿ-ಮಳೆಗೆ ನೆಲ್ಲಿಕಾರು ಗ್ರಾ. ಪಂ. ವ್ಯಾಪ್ತಿಯ ಮಾಂಟ್ರಾಡಿ ಗ್ರಾಮಗಳಲ್ಲಿ ಎರಡು ಮನೆಗಳು ಜಖಂಗೊಂಡಿದ್ದು, ಎಂಟಕ್ಕೂ ಅಧಿಕ ಮರಗಳು ಧರೆಗುರುಳಿವೆ.
ಮಾಂಟ್ರಾಡಿ ಗ್ರಾಮದ ಕೊಟ್ಟಿಬೆಟ್ಟು ನಿವಾಸಿ ವಿಜಯ ಎಂಬುವವರ ಮನೆಯ ಮೇಲ್ಛಾವಣಿಯ ಶೀಟ್ ಗಾಳಿಗೆ ಹಾರಿ ಹೋಗಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ. ನೆಲ್ಲಿಕಾರು ಗ್ರಾಮದ ಅನ್ನು ಕೊರಗ ಅವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆ ಹಾಗೂ ಶೌಚಾಲಯ ಜಖಂಗೊಂಡಿದೆ.
ಬೋರುಗುಡ್ಡೆ ಬಳಿಯ ಪಿಡಬ್ಲ್ಯೂಡಿ ರಸ್ತೆಗೆ ಬೃಹತ್ ಗಾತ್ರದ ಬೋಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಚಾಯತ್ ಕಚೇರಿ ಬಳಿಯ ನೆಡು ತೋಪುವಿನಲ್ಲಿ ಏಳು ಅಕೇಶಿಯ ಮರಗಳು ಬಿದ್ದಿವೆ.
