ಮೂಡುಬಿದಿರೆಯಲ್ಲಿ ‘ಜೀವೀಸ್ ಸಿಲ್ಕ್ & ಸೇಜ್’ ಲೋಕಾಪ೯ಣೆ
Thursday, May 14, 2026
ಮೂಡುಬಿದಿರೆ: ಜೀವಿತಾ ಶಂಕರ್ ಅವರು ಆಳ್ವಾಸ್ ರಸ್ತೆಯ ಮಿನೇಜಸ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಿಸಿರುವ ವಿವಿಧ ವಿನ್ಯಾಸದ ಉಡುಪುಗಳ ಮಳಿಗೆ ‘ಜೀವೀಸ್ ಸಿಲ್ಕ್ & ಸೇಜ್’ ಗುರುವಾರ ಲೋಕಾಪ೯ಣೆಗೊಂಡಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಮಹಿಳೆಯರ ಉಡುಪುಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಇತರ ರಾಷ್ಟ್ರಗಳಿಗಿಂತ ನಮ್ಮ ರಾಷ್ಟ್ರದಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನ ಮಾನವನ್ನು ನೀಡುತ್ತಾ ಬಂದಿದೆ. ನಮ್ಮ ದೇಶದಲ್ಲಿ ಹಬ್ಬ ಹರಿದಿನಗಳನ್ನು ನಾವು ವೈಭವೀಕರಣದಿಂದ ಆಚರಿಸುತ್ತಾ ಬರುತ್ತಿದೆಯಲ್ಲದೆ ಮಹಿಳೆಯರು ಇದನ್ನು ಸಡಗರದಿಂದ ಆಚರಿಸುತ್ತಾರೆ. ಇಂತಹ ಸಂದಭ೯ದಲ್ಲಿ ಬಟ್ಟೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಕಾಲ ಕಾಲಕ್ಕೆ ಬದಲಾವಣೆ ಅಗತ್ಯವಾಗಿದ್ದು ನಾವು ಬದಲಾಗಬೇಕಾಗಿದೆ ಎಂದ ಅವರು ಈ ಮಳಿಗೆಯಲ್ಲಿ ಮಹಿಳೆಯರಿಗೆ ಇಷ್ಟವಾಗುವ ಬಟ್ಟೆಗಳು ಸುಲಭ ರೀತಿಯಲ್ಲಿ ಸಿಗುವಂತಾಗಲಿ ಮತ್ತು ಅಭಿವೃದ್ಧಿಯನ್ನು ಹೊಂದುವಂತ್ತಾಗಲಿ ಎಂದು ಶುಭ ಹಾರೈಸಿದರು.
ನ್ಯಾಯವಾದಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಮಾತನಾಡಿ, ಸಾರಿ ಉಡುವುದೇ ಮಹಿಳೆಯರಿಗೆ ಸಂಭ್ರಮ. ಪುರುಷರು ಧರಿಸುವ ಹೆಚ್ಚು ರೇಟಿನ ಬಟ್ಟೆಗಳಿಗಿಂತಲೂ ಮಹಿಳೆಯರು ಧರಿಸುವ ಕಡಿಮೆ ವೆಚ್ಚದ ಸಾಂಪ್ರದಾಯಿಕ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಾರೆಂದ ಅವರು ಉತ್ತಮವಾದ ಸೀರೆ ಬೇಕಾದರೆ ಹಿಂದೆ ಉಡುಪಿ ಮತ್ತು ಮಂಗಳೂರು ಕಡೆಗೆ ಹೋಗುತ್ತಿದ್ದೆವು ಇದೀಗ ಜೀವಿತಾ ಅವರು ತೆರೆದಿರುವ ಈ ಮಳಿಗೆಯಲ್ಲಿಯೇ ಉತ್ತಮವಾದ ಸೀರೆಗಳ ಸಿಗುತ್ತದೆ ನಮ್ಮ ಸಹಕಾರ ಸದಾ ಇದೆ ಎಂದರು.
ನಿಶ್ಮಿತಾ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣ ಪಿ.ಎಂ, ಮೀನಾಕ್ಷಿ ನಾರಾಯಣ್, ಆಳ್ವಾಸ್ ನ ಡಾ.ಗ್ರೀಷ್ಮಾ ವಿವೇಕ್ ಆಳ್ವ, ವೈದ್ಯೆ ಡಾ. ಮಮತಾ ಗುರುಪ್ರಸಾದ್, ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶೆಟ್ಟಿ, ಕಾಳಿಕಾ ಡಿಜಿಟಲ್ಸ್ ನ ಮಾಲಕಿ ಶಾಂತಲಾ ಸೀತಾರಾಮ ಆಚಾರ್ಯ , ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಲಯನ್ ಜಗದೀಶ್ಚಂದ್ರ ಡಿ.ಕೆ, ಯುವವಾಹಿನಿ ಮೂಡುಬಿದಿರೆ ಘಟಕ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಶಂಕರ್ ಕೋಟ್ಯಾನ್ ಮೂಡುಕೊಣಾಜೆ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕಿ ಜೀವಿತಾ ಶಂಕರ್ ಹಾಗೂ ಶಂಕರ್ ಎ.ಕೋಟ್ಯಾನ್ ಅವರು ಸರ್ವರನ್ನು ಸ್ವಾಗತಿಸಿ ಯಶಸ್ಸಿಗೆ ಸಹಕಾರ ಕೋರಿದರು.
ಪೂರ್ಣಿಮ ಕೋಟ್ಯಾನ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

