ನೆಲ್ಲಿಕಾರಿನಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭ

ನೆಲ್ಲಿಕಾರಿನಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭ


ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ನೆಲ್ಲಿಕಾರು ಗ್ರಾ ಪಂ ಗ್ರಂಥಾಲಯ ಇವುಗಳ ಜಂಟಿ ಆಶ್ರಯದಲ್ಲಿ  ಬುಧವಾರ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಯಿತು.  

5 ದಿನಗಳ ಕಾಲ ನಡೆಯುವ ಮಕ್ಕಳ ಶಿಬಿರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ  ರಾಜು ಅವರು ಉದ್ಘಾಟಿಸಿ  ಶಿಬಿರದ ಮಹತ್ವ ಮತ್ತು ಸರಕಾರದ ಯೋಜನೆಯ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ  ಪಂಚಾಯತ್  ಕಾರ್ಯದರ್ಶಿ  ದಾಮೋದರ್ , ಗ್ರಾಮ ಪಂಚಾಯತ್ ಗ್ರಂಥಾಲಯ  ಸಲಹಾ ಸಮಿತಿ ಸದಸ್ಯರಾದ ಪ್ರಸನ್ನ ಬಲ್ಲಾಳ್, ವಿಠಲ ಬುಣ್ಣನ್, ಲತಾ, ಧನಿಶ್, ಪ್ರಜ್ಞಾ  ಪಂ.ವಾಪ್ತಿಯ ಶಾಲಾ ಶಿಕ್ಷಕಿ ರಾಧಿಕಾ, ಸೌಮ್ಯ,  ಪಂಚಾಯತ್ ರಾಜ್ ಇಲಾಖೆಯ ರಾಜ್ಯ ತರಬೇತು ದಾರರಾದ  ದೇವಕಿ ಮಾಂಟ್ರಾಡಿ,  ಗ್ರಾಮಸ್ಥರಾದ ವಿದೇಶ ಪೂಜಾರಿ, ಸುನೀತಾ ಹಂಪೆಜಾಲು, ಲತಾ ಬಳೆಂಜ, ಸಂಜೀವಿನಿ ಒಕ್ಕೂಟದ ಗೀತಾ,  ಮಕ್ಕಳ  ಬೇಸಿಗೆ ಶಿಬಿರದ ತರಬೇತುದಾರ ಸಕೇಶ್ ಬುಣ್ಣನ್,  ಮದುಮತಿ ಮಾಂಟ್ರಾಡಿ, ಹಾಗೂ ಗೀತಾ ಮಾಂಟ್ರಾಡಿ ರವರು ಮತ್ತು  ಪಂಚಾಯತ್ ಸಿಬ್ಬಂದಿಗಳಾದ ರೇಣುಕಾ, ಲಕ್ಷ್ಮಣ, ವಿಶೇಷ ಚೇತನರ ಪ್ರೇರಕಿ ಪ್ರಜ್ಞಾ,  ನರೇಗಾದ ಸುನೀತಾ, ದಿಶಾ ಟ್ರಸ್ಟ್  ನ ರಂಜಿನಿ ಉಪಸ್ಥಿತರಿದ್ದರು. 

ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿದರು. ನೆಲ್ಲಿಕಾರು ಪ್ರೌಢ ಶಾಲೆಯ ಶಿಕ್ಷಕರಾದ ಭೈರವೇಶ್ವರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ಸರಕಾರದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಂಥಾಲಯದ ಮೂಲಕ ಈ ಶಿಬಿರ ಆಯೋಜಿಸಿದ್ದು ಉತ್ತಮವಾಗಿ ನಡೆಸಲಾಗಿದೆ ಎಂದರು.

 ಗ್ರಂಥಾಲಯ ಮೇಲ್ವಿಚಾರಕಿ ಪ್ರಮೀಳಾ ವಂದಿಸಿದರು. 

ಶಿಬಿರದಲ್ಲಿ ಭಾಗವಹಿಸಲು 40 ಕ್ಕೂ ಮಿಕ್ಕಿದ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article