ನಿವೃತ್ತ ಮುಖ್ಯೋಪಾಧ್ಯಾಯಿನಿ ಗಿರಿಜ ಹೆಗ್ಡೆ ನಿಧನ

ನಿವೃತ್ತ ಮುಖ್ಯೋಪಾಧ್ಯಾಯಿನಿ ಗಿರಿಜ ಹೆಗ್ಡೆ ನಿಧನ


ಮೂಡುಬಿದಿರೆ: ನಿವೃತ್ತ ಮುಖ್ಯೋಪಾಧ್ಯಾಯಿನಿ, ಹೊಸಬೆಟ್ಟು ಪಕಿದಬೆಟ್ಟು ದಿ.ಶೀನಪ್ಪ ಹೆಗ್ಡೆ ಅವರ ಪತ್ನಿ, ಕಾರ್ಕಳ  ಅತ್ತೂರು ಹಲ್ಮೆಟ್ಟು ಗಿರಿಜಾ ಎಸ್‌. ಹೆಗ್ಡೆ (88) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಕಾರ್ಕಳ ಕಾಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದ ಅವರು ಇಂದಿರಾನಗರ, ನೀರೆಬೈಲೂರು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ನಂತರ ಕಲಂಬಾಡಿ ಪದವು ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಶಿಕ್ಷಕರಾಗಿ, ಮುಖ್ಯೋಪಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಅವರು ಸುಮಾರು 40 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಓರ್ವ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article