ಮೂಡುಬಿದಿರೆ ತಾಲೂಕಿನಲ್ಲಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆ
Wednesday, May 20, 2026
ಮೂಡುಬಿದಿರೆ: ಪ್ರತ್ಯೇಕ ಪ್ರಕರಣಗಳಲ್ಲಿ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ನಿವಾಸಿ ಜ್ಯೋತಿ (59) ತನ್ನ ಮಗಳ ಮನೆಯಲ್ಲಿ ಮಂಗಳವಾರ ರಾತ್ರಿ, ಇನ್ನೊಂದು ಪ್ರಕರಣದಲ್ಲಿ ತೋಡಾರು ಗ್ರಾಮದ ಶಾಂತಿಗುರಿ ಎಂಬಲ್ಲಿ ವಿಶ್ವನಾಥ (36) ಬುಧವಾರ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜ್ಯೋತಿ ಅವರ ಪತಿ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಸ್ವೀಪರ್ ಕೆಲಸವನ್ನು ಮಾಡುತ್ತಿದ್ದ ಅವರು ಅನಾರೋಗ್ಯದಿಂದ ನೊಂದು ಆತ್ಮಹತ್ಯೆ ಗೈದಿದ್ದಾರೆ. ಇವರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಕೂಲಿಕೆಲಸ ಮಾಡಿಕೊಂಡಿದ್ದ ವಿಶ್ವನಾಥ್ ಕುಡಿತದ ಚಟಹೊಂದಿದ್ದು ಇದರಿಂದಾಗಿ ಅವರ ಪತ್ನಿ ಮನನೊಂದು ಎರಡು ವಾರಗಳ ಹಿಂದೆ ತವರು ಮನೆಗೆ ತೆರಳಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಅವರಿಗೆ ಪುತ್ರ ಇದ್ದಾರೆ.