ದ್ವಿತೀಯ ಪಿ.ಯು.ನಲ್ಲಿ ಉತ್ತಮ ಅಂಕ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನಿಂದ ಮೌಲ್ಯ ಮತ್ತು ಸೋನಾಲ್ ಎಸ್.ಗೆ ಸನ್ಮಾನ

ದ್ವಿತೀಯ ಪಿ.ಯು.ನಲ್ಲಿ ಉತ್ತಮ ಅಂಕ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನಿಂದ ಮೌಲ್ಯ ಮತ್ತು ಸೋನಾಲ್ ಎಸ್.ಗೆ ಸನ್ಮಾನ


ಮೂಡುಬಿದಿರೆ: ಈ ಬಾರಿಯ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.96 ಫಲಿತಾಂಶದೊಂದಿಗೆ ತೇರ್ಗಡೆಗೊಂಡಿರುವ ಎಕ್ಸಲೆಂಟ್ ಕಾಲೇಜಿನ ವಿದ್ಯಾಥಿ೯ನಿ ಮೌಲ್ಯ ಹಾಗೂ ಶೇ 95.80 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿರುವ ಗುರುವಾಯನಕೆರೆ ಎಕ್ಸೆಲ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ ಸೋನಾಲ್ ಎಸ್ ಅವರಿಗೆ ಮೂಡುಬಿದಿರೆ ರೋಟರಿ ಟೆಂಪಲ್ ಟೌನ್ ವತಿಯಿಂದ ಸನ್ಮಾನಿಸಲಾಯಿತು. 


ಮೌಲ್ಯ ಅವರು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ -ರಶ್ಮಿತಾ ಅವರ ಪುತ್ರಿ. 

ಸೋನಾಲ್ ಎಸ್ ಅವರು ಉದ್ಯಮಿ, ಸಮಾಜ ಸೇವಕ, ಶಂಕರ್ ಎ.ಕೋಟ್ಯಾನ್- ಜೀವಿತಾ ಶಂಕರ್ ಅವರ ಪುತ್ರಿ ಯಾಗಿದ್ದಾರೆ.

‌ಕ್ಲಬ್ ಅಧ್ಯಕ್ಷ ಹರೀಶ್ ಎಂ.ಕೆ, ರೋಟರಿ ಅಸಿಸ್ಟೆಂಟ್ ಗವರ್ನರ್ ಉಮೇಶ್ ರಾವ್,ಸ್ಥಾಪಕ ಅಧ್ಯಕ್ಷ, ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ರಾಮಚಂದ್ರ ಮಿಜಾರ್, ಕಾರ್ಯದರ್ಶಿ ಭರತ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ಡೇನಿಸ್ ಪಿರೇರಾ, ಶಂಕರ್ ಎ.ಕೋಟ್ಯಾನ್, ಜೀವಿತಾ ಶಂಕರ್ ಮತ್ತಿತರರು ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article