ಮೂಡುಬಿದಿರೆ: ಹಿರಿಯ ನ್ಯಾಯಾಧೀಶ ಮಧುಕರ್ ಭಾಗವತ್ ಮತ್ತು ಕಿರಿಯ ನ್ಯಾಯಾಧೀಶೆ ಕಾವೇರಮ್ಮಗೆ ಬೀಳ್ಕೊಡುಗೆ

ಮೂಡುಬಿದಿರೆ: ಹಿರಿಯ ನ್ಯಾಯಾಧೀಶ ಮಧುಕರ್ ಭಾಗವತ್ ಮತ್ತು ಕಿರಿಯ ನ್ಯಾಯಾಧೀಶೆ ಕಾವೇರಮ್ಮಗೆ ಬೀಳ್ಕೊಡುಗೆ

ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ನೀಡುವ ಗುಣ ಭಾಗವತ್ ರಲ್ಲಿತ್ತು: ವಕೀಲ ನಾಗೇಶ್ ಶೆಟ್ಟಿ


ಮೂಡುಬಿದಿರೆ: ಕಳೆದ ಮೂರು ವರುಷಗಳಿಂದ ಮೂಡುಬಿದಿರೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರಾಗಿ ಉತ್ತಮ ರೀತಿಯಲ್ಲಿ ಕತ೯ವ್ಯವನ್ನು ನಿವ೯ಹಿಸಿ ಇದೀಗ ಬೆಂಗಳೂರಿಗೆ ವಗಾ೯ವಣೆಗೊಂಡಿರುವ  ಮಧುಕರ್ ಭಾಗವತ್ ಮತ್ತು ಒಂದು ವಷ೯ ಕಿರಿಯ ನ್ಯಾಯಾಧೀಶರಾಗಿ ಸೇವೆ ನೀಡಿ ಮೈಸೂರಿಗೆ ವಗಾ೯ವಣೆಗೊಂಡಿರುವ ಕಿರಿಯ ನ್ಯಾಯಾಧೀಶೆ ಕಾವೇರಮ್ಮ ಅವರಿಗೆ ಮೂಡುಬಿದಿರೆ ವಕೀಲರ ಸಂಘದಿಂದ ಗುರುವಾರ ಸಂಜೆ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಹಿರಿಯ ವಕೀಲ ನಾಗೇಶ್ ಶೆಟ್ಟಿ ಅವರು ವಕೀಲರ ಪರವಾಗಿ ಮಾತನಾಡಿ   ನ್ಯಾಯಾಲಯವು ದೇವಾಲಯವಿದ್ದಂತೆ. ನ್ಯಾಯಾಧೀಶರು ದೇವರಿದ್ದಂತೆ ಮತ್ತು ವಕೀಲರುಗಳು ಅಚ೯ಕರಿದ್ದಂತೆ. ನಾವು ದೇವರ ಮೇಲೆ ನಂಬಿಕೆ ಇಟ್ಟು ನಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸುತ್ತೇವೆ. ಈ ವಾದವನ್ನು ಪರಿಶೀಲಿಸಿ ಸರಿಯಾದ ನ್ಯಾಯವನ್ನು ನೀಡುವವರು ದೇವರೆಂಬ ನ್ಯಾಯಾಧೀಶರು.


ತಾನೊಬ್ಬ ನ್ಯಾಯಾಧೀಶನೆಂಬ ಅಹಂ ಇಲ್ಲದೆ ಹಿರಿಯರಿಗೆ ಗೌರವ, ಕಿರಿಯರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದವರು ಮತ್ತು ಆತ್ಮೀಯತೆಯೊಂದಿಗೆ ಎಲ್ಲರೊಂದಿಗೆ ಬೆರೆತವರು ಮಧುಕರ್ ಭಾಗವತ್ ಅವರು. ಮುಂದೆ ಮಂಗಳೂರಿನಲ್ಲಿ ಸಂಚಾರಿ ಹೈಕೋಟ್ ಪೀಠ ಆದರೆ ಜಡ್ಜ್ ಆಗಿ ಬರುವಂತ್ತಾಗಲಿ ಎಂದು ಆಶಿಸಿದರು. 


ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಬ್ಬರು ನ್ಯಾಯಾಧೀಶರು ಉತ್ತಮ ಕಾಯ೯ ನಿವ೯ಹಣೆಯನ್ನು ನೀಡಿದ್ದಾರೆ. ಹಿರಿಯ ನ್ಯಾಯಾಧೀಶರಾಗಿರುವ ಮಧುಕರ್ ಭಾಗವತ್ ಅವರು ಇನ್ನೊಬ್ಬರ ಭಾವನೆಗಳು ಮತ್ತು ನೋವನ್ನು ಅಥ೯ಮಾಡಿಕೊಳ್ಳುವ ಮನೋಭಾವವನ್ನು ಹೊಂದಿದವರು. ಆಸೆ ಮತ್ತು ಹೊಟ್ಟೆಕಿಚ್ಚು ಅವರಲ್ಲಿಲ್ಲ. ಅತೀ ಬುದ್ಧಿವಂತರು ಮತ್ತು ವೇಗದ ಓದುಗಾರಿಕೆಯ ಪ್ರಾವೀಣ್ಯವನ್ನು ಹೊಂದಿದವರಾಗಿದ್ದರು ಎಂದ ಅವರು ಕಾವೇರಮ್ಮ ಅವರು ಶಿಸ್ತು ಮತ್ತು ಆತ್ಮೀಯತೆಯನ್ನು ಮೈಗೂಡಿಸಿಕೊಂಡಿದ್ದರು. 


ಹಿರಿಯ ವಕೀಲರಾದ ಕೆ.ಆರ್. ಪಂಡಿತ್, ಮುರಳೀಧರ್ ಭಟ್, ವಿಜೇತ ಪಿಂಕಿ ಡೇಸಾ, ಅಶ್ವಿನಿ ಡಿ'ಸೋಜಾ ನ್ಯಾಯಧೀಶರುಗಳ ಕತ೯ವ್ಯ ನಿಷ್ಠೆಯ ಬಗ್ಗೆ ಮಾತನಾಡಿದರು. 

ಸಂಘದ ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸುರೇಶ್ ಕೆ. ಪೂಜಾರಿ ಕಾಯ೯ಕ್ರಮ ನಿರೂಪಿಸಿದರು. ಕಾಯ೯ದಶಿ೯ ಜಯಪ್ರಕಾಶ್ ವಂದಿಸಿದರು.


ದೇವರಿಗೆ ಸರಿಯಾಗಿ ಕತ೯ವ್ಯವನ್ನು ನಿವ೯ಹಿಸಿದ್ದೇನೆ. ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡದೆ ಪ್ರಾಮಾಣಿಕವಾಗಿ ತೀಪು೯ಗಳನ್ನು ನೀಡಿದ್ದೇನೆ.

 ಹಿರಿಯ, ಕಿರಿಯ ವಕೀಲರುಗಳ ಸಹಕಾರ ಸದಾ ಸ್ಮರಣೀಯ. ಇಲ್ಲಿನ ಆಂಜನೇಯ ದೇವರು ಸದಾ ನನಗೆ ರಕ್ಷಣೆಯನ್ನು ನೀಡಿ ಕಾಪಾಡುವ ಮೂಲಕ ಉತ್ತಮವಾಗಿ ಕತ೯ವ್ಯವನ್ನು ನಿಭಾಯಿಸಲು ಸಾಧ್ಯವಾಗಿದೆ: ಹಿರಿಯ ನ್ಯಾಯಾಧೀಶ ಮಧುಕರ್ ಭಾಗವತ್

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article