ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದಿಂದ ಸಂಕಷ್ಟದಲ್ಲಿರುವವರಿಗೆ ಧನ ಸಹಾಯ

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದಿಂದ ಸಂಕಷ್ಟದಲ್ಲಿರುವವರಿಗೆ ಧನ ಸಹಾಯ


ಮೂಡುಬಿದಿರೆ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು–ಮೂಡುಬಿದಿರೆ ಘಟಕದ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ಭಾನುವಾರ ಸಮಾಜ ಮಂದಿರದಲ್ಲಿ ಹಸ್ತಾಂತರಿಸಲಾಯಿತು. 

ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಇತ್ತೀಚೆಗೆ ಪುಚ್ಚೆಮೊಗರಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸಂಕಷ್ಟಕ್ಕೆ ಒಳಗಾದ ದೈವ ಪರಿಚಾರಕರಾದ ಸುನಿಲ್ ಶೆಟ್ಟಿ, ಯಶೋಧರ, ದಿನೇಶ್  ಚಿಕಿತ್ಸಾ ವೆಚ್ಚ ಹಾಗೂ ಸದಾಶಿವ ಶೆಟ್ಟಿಗಾರ್ ರವರ ವೈದ್ಯಕೀಯ ನೆರವಿಗೆ  ಧನಸಹಾಯ ನೀಡಲಾಯಿತು.

ಮಾಸ್ತಿಕಟ್ಟೆ ನೆಲ್ಲಿಗುಡ್ಡೆ ನಿವಾಸಿಗಳಾದ ಹಿಂದುಳಿದ ವರ್ಗದ  ತೀವ್ರ ಬಡತನದಲ್ಲಿರುವ  ಮಮತಾ ಹರೀಶ್ ಅವರ ಮಗಳ ವಿವಾಹಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು.

ಮೂಡುಬಿದಿರೆ ಘಟಕದ ಗೌರವಾಧ್ಯಕ್ಷರಾದ ಶ್ರೀಪತಿ ಭಟ್, ಕೇಂದ್ರೀಯ ಘಟಕದ ಪ್ರೇಮಾನಾಥ್ ಮಾರ್ಲ ಕೆ. ಹಾಗೂ ನೀಲೇಶ್ ಶೆಟ್ಟಿ, ಪದಾಧಿಕಾರಿಗಳಾದ ಪ್ರದೀಪ್ ಜೈನ್  ಬಾವದಗುತ್ತು, ಪುನೀತ್ ಕಟ್ಟೆಮಾರ್, ಶಾಂತರಾಮ್ ಕುಡ್ವ, ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್, ಸಂತೋಷ್ ಶೆಟ್ಟಿ, ತಾಕೊಡೆ ಬರ್ಕೆ ಅಮ್ಮಿ ಕೋಟ್ಯಾನ್ ಉಪಸ್ಥಿತರಿದ್ದರು.

ಸಂಚಾಲಕರಾದ ರವಿಪ್ರಸಾದ್ ಕೆ. ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article