ಮಳೆ ಹಾನಿ: ವಾಲ್ಪಾಡಿಯಲ್ಲಿ ಮನೆ ಮೇಲೆ ಬಿದ್ದ ಮರ: ಮಹಿಳೆಗೆ ಗಾಯ
Thursday, May 14, 2026
ಮೂಡುಬಿದಿರೆ: ತಾಲೂಕಿನ ವಾಲ್ಪಾಡಿ ಗ್ರಾಮದಲ್ಲಿ ಗುರುವಾರ ಬೀಸಿದ ಗಾಳಿ ಮಳೆಗೆ ಮನೆ ಹಾಗೂ ಕೃಷಿ ಭೂಮಿಗೆ ಹಾನಿಯಾದ ಘಟನೆ ಸಂಭವಿಸಿದೆ.
ಶೇಖರ ಪೂಜಾರಿ ಪತ್ನಿ ಸುಂದರಿ ವಾಸವಿರುವ ಮನೆಗೆ ಮರ ಬಿದ್ದ ಪರಿಣಾಮ ಸುಂದರಿ ಗಾಯಗೊಂಡಿದ್ದಾರೆ. ಇದೇ ಗ್ರಾಮದ ರಾಜು ಎಂಬುವವರ ಮನೆಗೂ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಮಳೆಯ ಆರ್ಭಟಕ್ಕೆ ಕೃಷಿ ತೋಟಗಳಿಗೂ ಹಾನಿಯಾಗಿದ್ದು ವ್ಯಾಪಕ ನಷ್ಟ ಉಂಟಾಗಿದೆ.
