ವರ್ಗಾವಣೆಗೊಂಡ ಅತೀ ವಂ. ಲಾರೆನ್ಸ್ ಮಸ್ಕ್ಯಾರೇನ್ಹಸ್ ಅವರಿಗೆ ಶುಭ ವಿದಾಯ
Monday, May 18, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಶಾಲೆಯ ಸಂಚಾಲಕ ಅತೀ ವಂ. ಲಾರೆನ್ಸ್ ಮಸ್ಕ್ಯಾರೇನ್ಹಸ್ ಅವರು ವಾಮಂಜೂರ್ ಚರ್ಚ್‌ಗೆ ವರ್ಗಾವಣೆಗೊಳ್ಳುತ್ತಿರುವ ಹಿನ್ನೆಲೆ ಅವರನ್ನು ಇಂದು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿಯಾಗಿ, ಪುಷ್ಪಗುಚ್ಚ ನೀಡಿ ಅಭಿನಂದಿಸಿ, ಶುಭಹಾರೆಯಿಸಿ, ವಿದಾಯಕೋರಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ, ಮುಖ್ಯ ಗುರು ವಂ. ಮ್ಯಾಕ್ಸಿಂ ಡಿಸೋಜಾ, ಉಪಾಧ್ಯಕ್ಷ ಜಾನ್ ಕುಟ್ಟಿನ, ಮಾಜಿ ಅಧ್ಯಕ್ಷ ಎನ್.ಕೆ. ಜಗನಿವಾಸ್ ರಾವ್, ಕಾರ್ಯದರ್ಶಿ ಬೆನೆಟ್ ಮೊಂತೇರೊ, ಸದಸ್ಯರುಗಳಾದ ಲಾರೆನ್ಸ್ ಗೊನ್ಸಲ್ವಿಸ್, ಸೋಮಶೇಖರ್ ರೈ, ಡಾ. ಅಮೃತ ಮಲ್ಲ, ದಿಕ್ಸನ್ ತಾವ್ರೋ ಮತ್ತಿತರರು ಉಪಸ್ಥಿತರಿದ್ದರು.