ಕುಕ್ಕೆ: ಆಶ್ಲೇಷ ನಕ್ಷತ್ರ ಹಿನ್ನೆಲೆ, ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳಿಂದ ದಾಖಲೆ 2500 ಸಾವಿರಕ್ಕೂ ಮಿಕ್ಕಿ ಆಶ್ಲೇಷ ಬಲಿ ಸೇವೆ
Saturday, May 23, 2026
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಅಧಿಕ ಸಂಖ್ಯೆಯ ಭಕ್ತಾದಿಗಳು ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದು ಬೆಳಗ್ಗೆಯ ಏಳು ಬ್ಯಾಚುಗಳಲ್ಲಿ ಸುಮಾರು 2500 ಸಾವಿರಕ್ಕೂ ಮಿಕ್ಕಿ ಆಶ್ಲೇಷ ಬಲಿ ಸೇವೆಯನ್ನ ಸಲ್ಲಿಸುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯನ ನಕ್ಷತ್ರವು ಆಶ್ಲೇಷವಾಗಿದ್ದರಿಂದ ಆಶ್ಲೇಷ ಬಲಿ ಸೇವೆ ಹರಕೆ ಹೊತ್ತ ಭಕ್ತಾದಿಗಳು ಏಕಾದಶಿ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಆಶ್ಲೇಷ ಬಲಿ ಸೇವೆ ನಡೆಯುತ್ತದೆ.ತಿಂಗಳಿ ನಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಹೆಚ್ಚಿನ ಭಕ್ತರು ಅದೇ ದಿನ ಬಂದು ಸೇವೆ ಸಲ್ಲಿಸುವಂಥದ್ದು ಸಾಮಾನ್ಯವಾಗಿದೆ.
ಆಶ್ಲೇಷ ಬಲಿಯು ದಿನಂಪ್ರತಿ ಬೆಳಗ್ಗೆ ಗಂಟೆ 6:30ಕ್ಕೆ ಆರಂಭವಾಗಿ 3 ಬ್ಯಾಚ್ ಹಾಗೂ ಸಂಜೆ ಗಂಟೆ 5:00ಕ್ಕೆ ಒಂದು ಬ್ಯಾಚಿನೊಂದಿಗೆ ಸೇವೆ ನಡೆಯುತ್ತದೆ. ಆದರೆ ಈ ದಿನದಂದು ದಾಖಲೆ ಸಂಖ್ಯೆಯ ಆಶೇಷಬಲಿ ಸೇವೆ ಆಗಿರುವುದು ಕುಕ್ಕೆ ಸುಬ್ರಹ್ಮಣ್ಯನ ಮಹತ್ವಯಾಗಿದೆ. ನಾಗದೋಷ,ಕಾಳಸರ್ಪದೋಷ, ಮದುವೆಯಾಗದಿರುವುದು, ಮಕ್ಕಳಾಗದಿರುವುದು, ವ್ಯಾಪಾರ ವೃದ್ಧಿ , ಆರೋಗ್ಯ ವೃದ್ಧಿ , ಮನಕ್ಲೇಶಗಳು,ಭೂಮಿಯ ಸಂಬಂಧಿತ ವ್ಯಾಜ್ಯಗಳು, ನೀರು, ಮನಃಶಾಂತಿ ಇತ್ಯಾದಿಗಳಿಗೆ ಆಶ್ಲೇಷ ಬಲಿ ಸೇವೆಯನ್ನು ಭಕ್ತರು ಬಂದು ಸಲ್ಲಿಸುತ್ತಾರೆ.
ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತಾದಿಗಳು ಬೆಳ್ಳಂ ಬೆಳಗ್ಗೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ಥಾನ ಮಾಡಿ ಅಲ್ಲಿಂದ ಶ್ರೀ ದೇವಳದಲ್ಲಿ ಆಶ್ಲೇಷ ಬಲಿ ರಸೀದಿ ಮಾಡಿಸಿ, ಸಂಕಲ್ಪ ಮಂದಿರ ದಲ್ಲಿ ಸಂಕಲ್ಪ ಮಾಡಿಸಿ, ತದನಂತರ ಆಶ್ಲೇಷ ಬಲಿ ನಡೆಯುವ ಅಂಗಣಕ್ಕೆ ಸರತಿ ಸಾಲಿನಲ್ಲಿ ತೆರಳು ತೆರಳುವುದಾಗಿದೆ. ದಿನದ ಬೆಳಗ್ಗೆಯ ಮೂರೂ ಬ್ಯಾಚುಗಳಲ್ಲಿ ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಸೇವೆ ಸಲ್ಲಿಸುತ್ತಾರೆ. ಉಳಿದವರು ಸಂಜೆ ಬ್ಯಾಚಿಗೆ ಹಾಜರಾಗಿ ಸೇವೆ ಸಲ್ಲಿಸಲು ವ್ಯವಸ್ಥೆ ಇರುತ್ತದೆ.

