ಮಹಾ ಶನಿ ಸಂಯೋಗ: ಹರಿಹರ ದೇವಸ್ಥಾನದಲ್ಲಿ ದಾಖಲೆ ಸಂಖ್ಯೆಯ ಶನಿ ಪೂಜೆ
Sunday, May 17, 2026
ಸುಬ್ರಹ್ಮಣ್ಯ: ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶನಿವಾರದಂದು ಸುಮಾರು 500ಕ್ಕೂ ಅಧಿಕ ಭಕ್ತಾಧಿಗಳು ಶ್ರೀ ದೇವರ ದರ್ಶನಕ್ಕೆ ಆಗಮಿಸಿದ್ದು, 330 ಶನಿಪೂಜೆ, 170 ರುದ್ರಾಭಿಷೇಕ, ಹಾಲು-ಪಾಯಸ, ಅವಲಕ್ಕಿ-ಪಂಚಕಜ್ಜಾಯ ಮುಂತಾದ ಸೇವೆಗಳೊಂದಿಗೆ ಮದ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡು ಶ್ರೀದೇವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ಸುಮಾರು 13 ವರ್ಷಗಳ ದೀರ್ಘ ಕಾಲದ ನಂತರ ಶನಿ ಜಯಂತಿ, ಶನಿ ಅಮಾವಾಸ್ಯೆ ಮತ್ತು ಶನಿವಾರ ಈ ಮೂರೂ ಒಟ್ಟಿಗೆ ಒಂದೇ ದಿನ ಒದಗಿ ಬಂದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅಪರೂಪದ ಮಹಾ ಸಂಯೋಗವನ್ನು ‘ಮಹಾ ಶನಿ ಸಂಯೋಗ’ ಎಂದು ಕರೆಯಲಾಗುತ್ತದೆ ಎಂದು ತಿಳಿದು ಬಂದಿದೆ. ಕೊನೆಯ ಬಾರಿಗೆ ಇಂತಹ ಅಪರೂಪದ ದಿನವು ಜೂನ್ 8, 2013 ರಂದು ಬಂದಿತ್ತು ಎಂಬುದು ಹಿರಿಯರ ಅಭಿಪ್ರಾಯ.
ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗದೀಶ್ ಪಡ್ಡು, ಶ್ರೀ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್, ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.