ಕಣಜದ ಹುಳು ಕಚ್ಚಿ ಸಾವು
Wednesday, May 20, 2026
ಸುಳ್ಯ: ಕಣಜದ ಹುಳು ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅರಂತೋಡು ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಮೇ.19 ರಂದು ನಡೆದಿರುವ ಬಗ್ಗೆ ವರದಿಯಾಗಿದೆ. ಜಗದೀಶ್ ಕಣಜದ ಹುಳು ಕಚ್ಚಿ ಮೃತಪಟ್ಟ ವ್ಯಕ್ತಿ.
ಜಗದೀಶ್ ಅವರು, ತಮ್ಮ ತೋಟದಲ್ಲಿ ಕಳೆ ಕಟಾವು ಯಂತ್ರದಲ್ಲಿ ಕಾಡು ಕಡಿಯುತ್ತಿದ್ದ ಸಂದರ್ಭ ಕಣಜದ ಹುಳುವಿನ ಗುಂಪು ಕಚ್ಚಿ ಗಂಭೀರ ಗಾಯಗೊಂಡಿದ್ದರು.
ಬಳಿಕ ಸ್ಥಳೀಯರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.