ಬಕ್ರೀದ್ ತ್ಯಾಗ ಬಲಿದಾನದ ಹಬ್ಬ: ಸ್ಪೀಕರ್ ಯು.ಟಿ. ಖಾದರ್

ಬಕ್ರೀದ್ ತ್ಯಾಗ ಬಲಿದಾನದ ಹಬ್ಬ: ಸ್ಪೀಕರ್ ಯು.ಟಿ. ಖಾದರ್


ಉಳ್ಳಾಲ: ಈದ್ ಅಝ್ಹ ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಹಬ್ಬವಾಗಿದ್ದು, ಪ್ರತಿಯೊಂದು ಹಬ್ಬವು ಪ್ರೀತಿ, ವಿಶ್ವಾಸ, ಸಹೋದರತೆಯನ್ನು ನೆನಪಿಸುತ್ತದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅವರು ಗುರುವಾರ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾ ಝಿಯಾರತ್ ಮಾಡಿ ಬಳಿಕ ಮಾಧ್ಯಮ ಜೊತೆ ಮಾತನಾಡಿದರು.

ಬಕ್ರೀದ್ ಪ್ರೀತಿ, ಪರೋಪಕಾರಿ ಮನೋಭಾವದ ಹಬ್ಬವಾಗಿದ್ದು, ನಮ್ಮ ಊರಲ್ಲಿ ಶಾಂತಿ ದಯಪಾಲಿಸಬೇಕು. ಶಾಂತಿ ಸೌಹಾರ್ದತೆ ಜೊತೆ ನೆಮ್ಮದಿ ಬದುಕು ಆಗಬೇಕು. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಊರಲ್ಲಿ ನಿರ್ಭಯದಿಂದ ಬದುಕಬೇಕು ಎಂಬುದೇ ನನ್ನ ಪ್ರಾರ್ಥನೆ ಎಂದರು.

ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ, ತ್ಯಾಗ ಬಲಿದಾನದ ಹಬ್ಬ ಆಗಿರುವ ಬಕ್ರೀದ್ ಸೌಹಾರ್ದತೆ, ಸಹೋದತೆಯ ಬೀಡಾಗಬೇಕು. ಶಾಂತಿ ಯನ್ನು ಸಾರುವ ಇಸ್ಲಾಮ್ ಏಕತೆಯನ್ನು ಬಯಸುತ್ತದೆ. ಪವಿತ್ರ ಹಜ್ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಸಂತೋಷದಿಂದ ಹಜ್ ಕರ್ಮ ನಿರ್ವಹಿಸಿ ಬರಲಿ ಎಂದು ಆಶಿಸಿದರು.

ಹಾಫಿಳ್ ಅಬ್ದುಲ್ ಮಜೀದ್ ಫಾಳ್ ಲಿ ಪೆರ್ನಾಲ್ ನಮಾಝ್ ಹಾಗೂ ಜುಮಾ ಕುತುಬಾ ನೆರವೇರಿಸಿದರು.

ಕೋಶಾಧಿಕಾರಿ ನಾಝಿಮ್ ರಹ್ಮಾನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article