ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ
ಅವರು ಸೋಮವಾರ ವೀರಕಂಭಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿಯಲ್ಲಿ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮೊದಲು ಶಾಲೆಯ ಎಲ್ಲಾ ಮಕ್ಕಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ಹೂ ಸಿಂಪಡಿಸಿ ಬರಮಾಡಿಕೊಳ್ಳಲಾಯಿತು. ನಂತರ ಶಾಲಾ ‘ಅಕ್ಷಯ ಬುಟ್ಟಿಗೆ’ ಆರತಿ ಮಾಡಿ ಗಣ್ಯರು ಹಾಗೂ ಮಕ್ಕಳ ಪೋಷಕರು ತಾವು ತಂದ ಅಕ್ಷರ ದಾಸೋಹ ಸಾಮಗ್ರಿಗಳನ್ನು ತುಂಬಿಸಿದರು.
ಶಾಲಾ ಶಿಕ್ಷಕರು ವಿಶೇಷವಾಗಿ ಈ ಸಾಲಿನಲ್ಲಿ ನೂತನವಾಗಿ ಶಾಲೆಗೆ ದಾಖಲಾತಿ ಪಡೆದ ಮಕ್ಕಳು ಹಾಗೂ ಮಕ್ಕಳ ಪೋಷಕರಿಗೆ ಪನ್ನೀರು ಸಿಂಪಡಿಸಿ, ಹೂ ಸಮರ್ಪಿಸಿ, ಆರತಿ ಬೆಳಗಿ ತಮ್ಮ ತರಗತಿಗಳಿಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸರಕಾರದಿಂದ ಸಿಗುವ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.
ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಇದರ ವಲಯ ಸೇನಾನಿ ಗಣೇಶ್ ಶೆಟ್ಟಿ, ಜೆಸಿಐ ಬಿ.ಸಿ.ರೋಡು ಇದರ ಅಧ್ಯಕ್ಷ ಕಿಶೋರ್ ಆಚಾರ್ಯ, ವೀರ ಕಂಬ ಗ್ರಾಮ ಪಂಚಾಯಿತಿನ ನಿಕಟಪೂವ೯ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಹಿರಿಯ ವಿದ್ಯಾರ್ಥಿ ಪ್ರಗತಿಪರ ಕೃಷಿಕ ಜಯಪ್ರಕಾಶ್ ತೆಕ್ಕಿಪಾಪು, ಶಾಲೆಗೆ ಉಚಿತವಾಗಿ ತರಕಾರಿ ಪೂರೈಸುವ ಚಂದ್ರಿಕಾ ವೆಜಿಟೇಬಲ್ಸ್ ಮೆಲ್ಕಾರ್ ಇದರ ಮಾಲಕ ಮಹಮದ್ ಶರೀಫ್, ಯುವ ವಾಹಿನಿ ಮಾಣಿ ಘಟಕ ಅಧ್ಯಕ್ಷ ಗಣೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಸ್ಥಿತರಿದ್ದರು.
ಶಾಲೆಯನ್ನು ತಳಿರು ತೋರಣ ಹಾಗೂ ಬೇಲೂನುಗಳ ಮೂಲಕ ಶೃಂಗರಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಪ್ರಸ್ತಾವನೆಗೈದು, ಸ್ವಾಗತಿಸಿದರು, ಶಿಕ್ಷಕ ತೌಸೀಫ್ ಅಹ್ಮದ್ ಶಾಲಾ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಕಾರ್ಯಕ್ರಮ ನಿರೋಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.