ಕುತ್ಯಾರು: ಶತಮಾನೋತ್ತರದ ಪ್ರಥಮ ವರ್ಷದ ಶಾಲಾ ಪ್ರಾರಂಭೋತ್ಸವ
Monday, June 1, 2026
ಶಿರ್ವ: ಶಿರ್ವ ಸಮೀಪದ ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲಾ ಶತಮಾನೋತ್ತರದ ಪ್ರಥಮ ವರ್ಷದ ಶಾಲಾ ಪ್ರಾರಂಭೋತ್ಸವ ಸೋಮವಾರ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವೇ.ಮೂ.ಕೇಂಜ ಶ್ರೀಧರ ತಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲಾ ಮುಂಬೈ ಸಮಿತಿ ಸಂಚಾಲಕ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ, ಸದಸ್ಯ ವಿಶ್ವನಾಥ್ ಭಂಡಾರಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶಿರ್ವ ಸಿ.ಎ.ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಪಂಚಾಯತ್ ಸದಸ್ಯ ಸಂಪತ್, ನಿವೃತ್ತ ಮುಖ್ಯ ಶಿಕ್ಷಕರುಗಳಾದ ಕೆ.ಶ್ರೀನಿವಾಸ ರಾವ್, ಪಾಂಡುರಂಗ ಹೆಗ್ಡೆ, ಶಿಕ್ಷಣ ಪರಿಕರಗಳ ದಾನಿಗಳಾದ ಸಾಯಿನಾಥ್ ಶೆಟ್ಟಿ, ಸದ್ಯೋಜಾತ ಆಚಾರ್ಯ ಇವರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಪಟೇಲ್ ಕಿಶೋರ್ ಕುಮಾರ್, ಜಯ ಶೆಟ್ಟಿ, ಕಿಶೋರ್ ಪಿಲಾರು, ರವಿ ಶೆಟ್ಟಿ, ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕಿ ಸುನೀತಾ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನೇಶ್ ಕುಲಾಲ್ ವಂದಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಬಲೂನು, ಶಾಲಾ ಶೈಕ್ಷಣಿಕ ಪರಿಕರಗಳು, ಸಿಹಿ ತಿಂಡಿ ನೀಡಿ ಸಂಭ್ರಮಾಚರಣೆ ಮಾಡಲಾಯಿತು.