ಮಾಡೂರು ಶಾಲಾ ಪ್ರಾರಂಭೋತ್ಸವ, ಕೊಠಡಿ ಉದ್ಘಾಟನೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ಅವರು, ವ್ಯಕ್ತತ್ವ ರೂಪಿಸಲು ವಿದ್ಯಾಭ್ಯಾಸ ಪ್ರಥಮವಾಗಿ ಬೇಕು. ತಾಯಿ ನಮಗೆ ಪ್ರಥಮ ಗುರು ಆಗಿದ್ದರೂ ಶಿಕ್ಷಣ ಪಡೆಯಲು ಶಿಕ್ಷಕರುಬೇಕಾಗುತ್ತದೆ. ಶಿಕ್ಷಕರನ್ನು ಗೌರವಿಸುವುದು ನಮ್ಮ ಜವಾಬ್ದಾರಿ ಎಂದರು.
ಕೌನ್ಸಿಲರ್ ಸುಜಿತ್ ಮಾಡೂರು ಮಾತನಾಡಿ, ಶಿಕ್ಷಣ ಯಶಸ್ಸು ಆಗಲು ಪೋಷಕರ ಸಹಕಾರ ಅಗತ್ಯ ಇದೆ. ಈಗಿನ ಕಾಲದಲ್ಲಿ ಮಕ್ಕಳಿಗೆ ಎಲ್ಲಾ ಸವಲತ್ತುಗಳನ್ನು ನೀಡಿ ಶಾಲೆಗೆ ಕರೆದುಕೊಂಡು ಬರುತ್ತೇವೆ. ಅವರ ವಿದ್ಯಾಭ್ಯಾಸ ಕೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮದು ಎಂದರು.
ಕಿರಣ್ ಮಾತನಾಡಿ ಶಿಕ್ಷಣ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಇದನ್ನು ನಾವು ಜತೆಯಾಗಿ ಮಾಡೊಣ ಎಂದು ಕರೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ. ಅಝೀಝ್ ಮಾತನಾಡಿ, ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣಕಾಂತ್ ಶಾಲೆಯ ಎರಡನೇ ತರಗತಿ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ವಯಂ ನಿವೃತ್ತಿ ಪಡೆದ ಅಡುಗೆ ಸಿಬ್ಬಂದಿ ನಳಿನಿ ಅವರನ್ನು ಸನ್ಮಾನಿಸಲಾಯಿತು.
ವಿಕ್ರಮ್, ಕಿಶೋರ್ ಅಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ., ಅಝೀಝ್, ಅಬ್ದುಲ್ ರಹ್ಮಾನ್, ಪಿಟೆಎ ಅಧ್ಯಕ್ಷ ಭಾಸ್ಕರ ಮಡ್ಯಾರ್, ಉಪಾಧ್ಯಕ್ಷ ಝೌವುರ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಪುಷ್ಪ ಯು. ಸ್ವಾಗತಿಸಿದರು. ಸಹಶಿಕ್ಷಕಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿ, ಜೀವಿತ ವಂದಿಸಿದರು.