ಗಾಳಿ, ಮಳೆಗೆ ಹಾನಿ
Wednesday, June 17, 2026
ಬಂಟ್ವಾಳ: ಮಂಗಳವಾರ ಅತ್ರಿ ಬಂಟ್ವಾಳ ತಾಲೂಕಿನ ಕೆಲಭಾಗದಲ್ಲಿ ಗಾಳಿ, ಮಳೆಗೆ ಹಾನಿಯಾದ ಘಟನೆ ನಡೆದಿದೆ.
ತಾಲೂಕಿನ ಮೂಡನಡಗೋಡು ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ನೀಲಮ್ಮ ಸೀನಪ್ಪ ಪೂಜಾರಿ ಅವರ ವಾಸದ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದು ಹಾನಿ ಉಂಟಾಗಿದೆ.
ಅದೇ ರೀತಿ ಪುಣಚ ಗ್ರಾಮದ ಕೃಷ್ಣ ಮೂಲೆ ನಿವಾಸಿ ಬಿ. ಜಗನ್ನಾಥ ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು, ಈ ಎರಡೂ ಪ್ರಕರಣದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಕಂದಾಯ ಕಚೇರಿ ಮೂಲಗಳು ತಿಳಿಸಿವೆ.
ಸ್ಥಳೀಯ ಕಂದಾಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷದಟದ ಬಗ್ಗೆ ಅಂದಾಜಿಸಿದ್ದಾರೆ. ಬಂಟ್ವಾಳ, ಬಿ.ಸಿ. ರೋಡು ಪರಿಸರದಲ್ಲಿ ಪೂರ್ತಿ ಬಿಸಿಲಿನ ಝಳದ ಪರಿಸ್ಥಿತಿ ಇತ್ತು.