ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದಿಂದ ಬಣ್ಣಗಾರಿಕೆ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದಿಂದ ಬಣ್ಣಗಾರಿಕೆ ಶಿಬಿರ


ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪುಂಜಾಲಕಟ್ಟೆ ಘಟಕ ಹಾಗೂ ಶ್ರುತಿ ಆರ್ಟ್ಸ್ ಕಾವಳಕಟ್ಟೆ ಇದರ ಆಶ್ರಯದಲ್ಲಿ ಯಕ್ಷಗಾನ ಬಣ್ಣಗಾರಿಕೆ ತರಬೇತಿ ಶಿಬಿರಕ್ಕೆ ರವಿವಾರ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಉಪಾಧ್ಯಕ್ಷ, ಹಿರಿಯ ಯಕ್ಷಗಾನ ಕಲಾವಿದ ದಿವಾಕರ ದಾಸ್ ಕಾವಳಕಟ್ಟೆ ಅವರು ಶಿಬಿರವನ್ನು ಉದ್ಘಾಟಿಸಿ, ಶುಭ ಹಾರೈಸಿದರು.


ಘಟಕದ ಅಧ್ಯಕ್ಷ ಹರೀಂದ್ರ ಟಿ. ಪೈ ಅವರು ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಉಮಾ ಡಿ. ಗೌಡ, ಅಧ್ಯಕ್ಷೆ ಶಶಿಕಲಾ ಗೋಪಾಲ ಪೂಜಾರಿ, ಯಕ್ಷಗುರು ಸಾಯಿಸುಮಾ ನಾವಡ ಕಾರಿಂಜ, ಪದಾಧಿಕಾರಿಗಳಾದ ಶೋಭಾ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ವಿನೋದ್, ಸುರೇಶ ಶೆಟ್ಟಿ ಮಜಲೋಡಿ, ಅಜಿತ್ ಶೆಟ್ಟಿ ಕಾರಿಂಜ ಪ್ರ. ಕಾರ್ಯದರ್ಶಿ ಸತೀಶ್ ಆಚಾರ್ಯ ಬೆರ್ಕಳ,  ಮತ್ತಿತರರು ಉಪಸ್ಥಿತರಿದ್ದರು. 

ಯಕ್ಷಗಾನ ಕಲಾವಿದರಾದ ದಿವಾಕರ ದಾಸ್, ಪ್ರಭಾಕರ ಶೆಟ್ಟಿ ತೆಂಕಕಾರಂದೂರು, ಶಶಿಧರ ಬಾಚಕೆರೆ, ಸಾಯಿಸುಮಾ ನಾವಡ ಅವರು ಬಣ್ಣಗಾರಿಕೆ ತರಬೇತಿ ನೀಡಿದರು.

ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article