ಯುವವಾಹಿನಿ ಮಾಣಿ ಘಟಕದಿಂದ ಯುವ ವೃಕ್ಷೋತ್ಸವ ಕಾರ್ಯಕ್ರಮ
Sunday, June 14, 2026
ಬಂಟ್ವಾಳ: ಯುವವಾಹಿನಿ ಮಾಣಿ ಘಟಕದಿಂದ ಎರಡನೇ ಹಂತದ ಯುವ ವೃಕ್ಷೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ಮೂಲಕ ಮರದ ನೆರಳು ಬದುಕಿಗೆ ನೆರಳುಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕೆದಿಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಹಾಗೂ ಅಂಗನವಾಡಿ ಕೇಂದ್ರ ಪೆರಾಜೆಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.
ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ, ಉಪಾಧ್ಯಕ್ಷ ಸುಜಿತ್ ಅಂಚನ್, ಕೋಶಾಧಿಕಾರಿಯಾದ ಡಾ. ತ್ರಿವೇಣಿ ರಮೇಶ್, ನಿತಿನ್ ಅಂಗರಾಜೆ, ಸತೀಶ್ ಮುರುವ, ಮಾರಪ್ಪ ಸುವರ್ಣ, ರಾಜೇಶ್ ಬಲ್ಯ, ಬಾಲಕೃಷ್ಣ ದೇಲಬೆಟ್ಟು ಹಾಗೂ ಯುವವಾಹಿನಿಯ ಸದಸ್ಯರು ಉಪಸ್ಥಿತರಿದ್ದರು.