ಯುವತಿ ನಾಪತ್ತೆ
Friday, June 12, 2026
ಬಂಟ್ವಾಳ: ಹಗಲು ಹೊತ್ತಿನಲ್ಲಿ ತಂದೆ-ತಾಯಿ ಇಬ್ಬರು ಕೆಲಸಕ್ಕೆ ಹೋಗಿದ್ದ ವೇಳೆ ಪುತ್ರಿ ಮನೆಯಿಂದ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರು ನಿವಾಸಿ ಮಾದೇವಿ (21) ನಾಪತ್ತೆಯಾದ ಯುವತಿಯಾಗಿದ್ದಾಳೆ. ಈಕೆ ಸುಮಾರು 6 ತಿಂಗಳ ಕಾಲ ಧಾರವಾಡದಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು.
ಇತ್ತೀಚೆಗೆ ಕೆಲಸ ಬಿಟ್ಟು ಊರಿಗೆ ಬಂದು ತಂದೆ ತಾಯಿ ಜೊತೆ ಮನೆಯಲ್ಲಿದ್ದಳು. ಜೂ.11 ರಂದು ಬೆಳಗ್ಗೆ ಈಕೆಯ ತಂದೆ ತಾಯಿ ಇಬ್ಬರು ಕೆಲಸಕ್ಕೆಂದು ತೆರಳಿದ್ದರು. ಸಂಜೆ ಇವರು ಮನೆಗೆ ಬಂದಾಗ ಮಗಳು ಮನೆಯಿಂದ ನಾಪತ್ತೆಯಾಗಿದ್ದಾಳೆ.
ಆಕೆಯ ಹಳೇ ಪ್ರಿಯಕರನಿಗೆ ವಿಚಾರಿಸಲು ಕರೆ ಮೊಬೈಲ್ ಗೆ ವಿಚಾಸರಿಸಲು ಕರೆ ಮಾಡಿದಾಗ ಸ್ವಿಚ್ಚ್ ಆಪ್ ಆಗಿತ್ತು. ಮನೆಯಿಂದ ಹೋಗುವಾಗ ಈಕೆ ಹಣ ಮತ್ತು ಚಿನ್ನವನ್ನು ಕೂಡ ತೆಗೆದುಕೊಂಡು ಹೋಗಿರುವ ಬಗ್ಗೆ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೇದು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.