ನೀರುಪಾಲಾದವರ ಮೃತದೇಹ ಪತ್ತೆ

ನೀರುಪಾಲಾದವರ ಮೃತದೇಹ ಪತ್ತೆ

ಕಾಸರಗೋಡು: ರವಿವಾರ ಸಂಜೆ ಬೇಕಲ ಪಳ್ಳಿಕೆರೆಯಲ್ಲಿ ಸಮುದ್ರಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

ಕೋಟ್ಟಯಂ ಚಂಗನಾಶೇರಿಯ ಅಂಕಿತ್ ಮತ್ತು ಅಪ್ಪು ಎಂಬವರು ಸಮುದ್ರಪಾಲಾಗಿದ್ದರು. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದರು. 

ಕರಾವಳಿ ಪೊಲೀಸ್, ನಾಗರಿಕರು ಹಾಗೂ ಪೊಲೀಸರು ನಡೆಸಿದ ಶೋಧಕಾರ್ಯಾಚರಣೆಯಿಂದ ಚಿತ್ತಾರಿ ಮತ್ತು ಆಜನೂರು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಮೃತದೇಹ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article