ಕನ್ನಡ ವಿರೋಧಿ ಅಂಶ: ಉಸ್ತುವಾರಿಗೆ ಮನವಿ
Monday, June 15, 2026
ಕಾಸರಗೋಡು: ರಾಜ್ಯ ಸ್ಥಳೀಯ ಆಡಳಿತ ಹಾಗೂ ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಕೆ .ಎಂ .ಶಾಜಿಯವರನ್ನು ಭೇಟಿಯಾದ ಕರ್ನಾಟಕ ಸಮಿತಿ ಪದಾಧಿಕಾರಿಗಳು ಮಲಯಾಳಂ ಭಾಷಾ ಮಾಸೂದೆಯಲ್ಲಿರುವ ಕನ್ನಡ ವಿರೋಧಿ ಅಂಶಗಳನ್ನು ಮನವಿ ಮೂಲಕ ವಿವರಿಸಿದರು.
ನಿಯೋಗದಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳು ಕುರಾಯ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೋಟ್ಟೆತೋಡಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಸುಕೇಶ ಎ, ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.