ಮಂಗಳೂರು ವಿ.ವಿ.ಯಲ್ಲಿ ಶೂನ್ಯ ಕಸ ನಿರ್ವಹಣೆ ತರಬೇತಿ

ಮಂಗಳೂರು ವಿ.ವಿ.ಯಲ್ಲಿ ಶೂನ್ಯ ಕಸ ನಿರ್ವಹಣೆ ತರಬೇತಿ


ಕೊಣಾಜೆ: ಮಂಗಳೂರು ವಿ.ವಿ.ಯ ಸ್ವಚ್ಛತಾ ಸಿಬ್ಬಂದಿಗಳಿಗೆ ಮೂಲದಲ್ಲೇ ಕಸವನ್ನು ವಿಂಗಡಿಸಿ ಸಂಪನ್ಮೂವಾಗಿ ಪರಿವರ್ತಿಸುವ ಶೂನ್ಯ ತ್ಯಾಜ್ಯ ನಿರ್ವಹಣೆ ವಿಧಾನ ಕುರಿತು ಅರಿವು ಮೂಡಿಸುವ ಮಾಹಿತಿ ಕಾರ್ಯಕ್ರಮ ನಡೆಯಿತು.

ಮಂಗಳೂರು ವಿ.ವಿ.ಯ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗ ಮತ್ತು ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಲೆಕ್ಚರ್ ಹಾಲ್‌ನಲ್ಲಿ ನಡೆದ ಮಾಹಿತಿ ಕಾರ್ಯಕ್ರಮ ಕ್ರಮದಲ್ಲಿ ಭಾಗವಹಿಸಿದ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅವರು, ಕಸದ ಅಸಮರ್ಪಕ ನಿರ್ವಹಣೆಯಿಂದಾಗುವ ಅಪಾಯ, ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಉಪಾಯಗಳು ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು. 

ಟ್ರಸ್ಟ್ ನಿರ್ದೇಶಕ ಭುವಿ ಚಿತ್ರ ಪ್ರದರ್ಶನದ ಮೂಲಕ ಬಯಲು ಕಸಾಲಯಗಳ ಬೆಂಕಿಯಿಂದ ಪರಿಸರ ಜೀವ ಸಂಕುಲಕ್ಕೆ ಆಗತ್ತಿರುವ ಕಸ ಕಂಠಕಗಳ ಬಗ್ಗೆ ತಿಳಿಸಿದರು.

ಸಮಜ ಕಾರ್ಯ ವಿಭಾಗದ ಮುಖ್ಯಸ್ಥ ಪೌಲ್ ಜಿ. ಅಕ್ವಿನಾಸ್ ಮಂಗಳೂರು ವಿ.ವಿ.ಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶೂನ್ಯ ಕಸ ನಿರ್ವಹಣೆ ಮಾಹಿತಿ ನೀಡುವುದು ಅಗತ್ಯವಿದೆ ಎಂದರು. 

ಸಹಾಯಕ ಪ್ರಾಧ್ಯಾಪಕಿ ಡಾ. ಯಶಸ್ವಿನಿ ಭಟ್ಟಂಗಾಯ ಪ್ರಾಸ್ತಾವಿಕ ಮಾತನಾಡಿದರು. ಪುತ್ತೂರಿನ ಸ್ವಚ್ಛತಾ ಸೇನಾನಿ ಆಸ್ವಾಲ್ಡ್ ಸಾಲ್ದಾನ, ಸಂಶೋಧನಾ ವಿದ್ಯಾರ್ಥಿ ವಿದ್ಯಾಥಿಗಳು ಉಪಸ್ಥಿತರಿದ್ದರು. ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಲಿಖಿತ, ಅಕ್ಷತಾ, ಸಾಕೇತ್ ಕಾರ್ಯಕ್ರಮ ಸಯೋಜಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article