ಹೆಲ್ಮೆಟ್ ಧರಿಸದೆ ನಾಲ್ವರು ಯುವತಿಯರ ಸ್ಕೂಟರ್ ಸವಾರಿ: ವಿಡಿಯೋ ವೈರಲ್

ಹೆಲ್ಮೆಟ್ ಧರಿಸದೆ ನಾಲ್ವರು ಯುವತಿಯರ ಸ್ಕೂಟರ್ ಸವಾರಿ: ವಿಡಿಯೋ ವೈರಲ್


ಉಳ್ಳಾಲ: ನಾಲ್ವರು  ಯುವತಿಯರು ಚಲಿಸುತ್ತಿದ್ದ ಸ್ಕೂಟರೊಂದು  ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ನಿನ್ನೆ ರಾತ್ರಿ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ. ಯುವತಿಯರು ಹೆಲ್ಮೆಟ್ ಧರಿಸದೆ ಸ್ಕೂಟರಲ್ಲಿ ನಾಲ್ವರು ಸವಾರಿ ಮಾಡಿ ಹುಚ್ಚಾಟ ಮೆರೆದಿದ್ದಲ್ಲದೆ, ರಸ್ತೆ ಬದಿಗೆ ಬಿದ್ದಿರುವ ಘಟನೆಯ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ನಿನ್ನೆ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ತೊಕ್ಕೊಟ್ಟು ಒಳಪೇಟೆಯ ಎಬಿಸಿ ಕ್ಲಬ್ ಬಳಿ ಘಟನೆ ನಡೆದಿದೆ. ಉಳ್ಳಾಲ ಮೇಲಂಗಡಿಯಿಂದ ಟಿ.ಸಿ ರೋಡ್ ಮಾರ್ಗವಾಗಿ ತೊಕ್ಕೊಟ್ಟು ಒಳಪೇಟೆಗೆ ಸ್ಕೂಟರಲ್ಲಿ ಬರುತ್ತಿದ್ದ ಯುವತಿಯರು ರಸ್ತೆಯ ಹಂಪ್ಸ್ ದಾಟುವಾಗ ನಿಯಂತ್ರಣ ತಪ್ಪಿದ್ದು, ಸ್ಕೂಟರನ್ನ ಎಬಿಸಿ ಕ್ಲಬ್ ಕಡೆಗೆ ನುಗ್ಗಿಸಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆಸಿ, ಕೆಳಗಡೆ ಬಿದ್ದಿದ್ದಾರೆ.

ಘಟನೆ ನಡೆದ ವೇಳೆ ಎಬಿಸಿ ಕ್ಲಬ್ ಒಳಗಡೆ ಸೇರಿದ್ದ ಯುವಕರು ಹೊರಗೆ ಓಡಿ ಬಂದಿದ್ದು, ಸ್ಕೂಟರಿಂದ ಕೆಳಗಡೆ ಬಿದ್ದಿದ್ದ ಯುವತಿಯರನ್ನ ಮೇಲಕ್ಕೆತ್ತಿ ಉಪಚರಿಸಿದ್ದಾರೆ. 

ಘಟನೆಯ ವೀಡಿಯೋ ಸಿಸಿ ಕ್ಯಾಮೆರದಲ್ಲಿ ದಾಖಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಉಳ್ಳಾಲ ಮೇಲಂಗಡಿಯ ಅಪ್ರಾಪ್ತ ಕಾಲೇಜು ಯುವತಿಯರು ಸ್ಕೂಟರಲ್ಲಿ ಸವಾರಿ ನಡೆಸಿರುವುದಾಗಿ ಮಾಹಿತಿ ಲಭಿಸಿದೆ. ಏನೋ ಅದೃಷ್ಟವಶಾತ್ ಘಟನೆಯಿಂದ ಸ್ಕೂಟರ್ ನಲ್ಲಿದ್ದ ಯುವತಿಯರು ಸೇರಿದಂತೆ ಪಾದಚಾರಿಗಳಿಗೆ ಯಾವುದೇ ಅನಾಹುತ ಸಂಭವಿಸಿಲ್ಲ.

ಘಟನೆಯಿಂದ ಎಬಿಸಿ ಕ್ಲಬ್ ಸದಸ್ಯರ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯುಂಟಾಗಿದೆ. ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿ ಹುಚ್ಚಾಟ ಮೆರೆದ ಯುವತಿಯರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article