ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ
Wednesday, June 17, 2026
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 29ನೇ ಕಂಬ್ಳ ವಾರ್ಡಿನ ವೇರ್ ಹೌಸ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿಯು 40ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು, ಅದರ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.
ಬಳಿಕ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಈ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ನೆರವೇರಲಿದೆ. ಈ ಸಂದರ್ಭದಲ್ಲಿ ಉಂಟಾಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸುವಂತೆ ಶಾಸಕರು ಮನವಿ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಪ್ರಮುಖರಾದ ರಕ್ಷಿತ್ ಕೊಟ್ಟಾರಿ, ಜಯರಾಜ್ ಕೊಟ್ಟಾರಿ, ರಿತೇಶ್ ಶೆಟ್ಟಿ, ಪ್ರಕಾಶ್ ಕೊಡಿಯಾಲ್ ಬೈಲ್, ಪ್ರವೀಣ್ ನಿಡ್ಡೆಲ್, ವಿಮಲಾ ಟೀಚರ್, ರೇಖಾ ಶೆಟ್ಟಿ, ಗಣೇಶ್ ಪೈ, ಸಂತೋಷ್ ಶೇಟ್, ನಾಗರಾಜ್ ಭಟ್, ಎಂ.ವಿಠಲದಾಸ್ ಭಟ್, ಮೋಹನ್ ಶೆಟ್ಟಿ, ಸುಮೀತ್ ಶೆಟ್ಟಿ, ವಿಕ್ರಮ್ ಕೊಟ್ಟಾರಿ ಸೇರಿದಂತೆ ಪರಿಸರದ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.