ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳ್ಳಿಗುಡ್ಡೆ ಬಳ್ಕೂರು ಶಾಲಾ ಆರಂಭೋತ್ಸವ ಮತ್ತು ಪೋಷಕ ಶಿಕ್ಷಕರ ಮಹಾಸಭೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳ್ಳಿಗುಡ್ಡೆ ಬಳ್ಕೂರು ಶಾಲಾ ಆರಂಭೋತ್ಸವ ಮತ್ತು ಪೋಷಕ ಶಿಕ್ಷಕರ ಮಹಾಸಭೆ


ಕುಂದಾಪುರ: ಜೂ.1 ರಂದು ಬಳ್ಕೂರು ಕಳ್ಳಿಗುಡ್ಡೆ ಶಾಲಾ ಆರಂಭೋತ್ಸವ ಮತ್ತು ಪೋಷಕರ ಮಹಾಸಭೆ ನಡೆಯಿತು.ಕೋಣಿ ಕ್ಲಸ್ಟರ್ ಸಿ.ಆರ್.ಪಿ. ಸುಮನಾ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 

ಎಸ್.ಡಿ.ಎಂ.ಸಿ. ಅಧ್ಯಕ್ಷೆ ಗುಲಾಬಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಬಲೂನು ನೀಡಿ ಶಾಲೆಗೆ ಸ್ವಾಗತಿಸಲಾಯಿತು. ಪೋಷಕರು ರಂಗೋಲಿ ಮತ್ತು ಬಣ್ಣದ ಕಾಗದದಿಂದ ಶಾಲೆಯನ್ನು ಸಿಂಗರಿಸಿದ್ದರು.

ಬಳ್ಕೂರು ಗ್ರಾಮ ಪಂಚಾಯಿತ್‌ನ ಮಾಜಿ ಉಪಾಧ್ಯಕ್ಷ ಅಶೋಕ್ ಕುಂದಾಪುರ ತಾಲೂಕು ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಶಿ ಬಳ್ಕೂರು, ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್, ಗೌರವ ಶಿಕ್ಷಕಿ ಶೈಲಾ, ಸರ್ವ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಶ್ರೀನಾಥ ಜಿ. ಪೂಜಾರಿ ಅವರು ಈ ಶೈಕ್ಷಣಿಕ ವರ್ಷದ ಯೋಜನೆಗಳ ಬಗ್ಗೆ ವಿವರಿಸಿದರು. ಸಹ ಶಿಕ್ಷಕ ರಾಘವೇಂದ್ರ ಗುಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article