ಪ್ರೊ. ಭಗವಾನ್‌ನನ್ನು ಕೂಡಲೇ ಬಂಧಿಸಿ ಮಾನಸಿಕ ಚಿಕಿತ್ಸೆ ನೀಡಲಿ: ಸತೀಶ್ ಕುಂಪಲ
Tuesday, June 16, 2026
ಮಂಗಳೂರು: ಶ್ರೀರಾಮಚಂದ್ರ ದೇವರಿಗೆ ನಿಂದನಾತ್ಮಕ ಮಾತುಗಳನ್ನು ಆಡಿರುವ ಪ್ರೊ. ಭಗವಾನ್ ಮೇಲೆ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಮತಿಭ್ರಮಣೆಗೊಂಡಿರುವ ಆತನನ್ನು ಬಂಧಿಸಿ ಮಾನಸಿಕ ಚಿಕಿತ್ಸೆ ನೀಡಬೇಕು ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದು ಧರ್ಮ, ದೇವರುಗಳನ್ನು ನಿಂದಿಸುವುದೇ ಈತನ ಕಾಯಕವಾಗಿದೆ. ಹಿಂದುಗಳಲ್ಲಿರುವ ಸಹಿಷ್ಣುತೆ ದೌರ್ಬಲ್ಯ ಎಂದು ತಿಳಿದಿರುವಂತಿದೆ. ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ವ್ಯಕ್ತಿಗಳನ್ನು ಬಹಿಷ್ಕರಿಸಬೇಕು. ದೇವರನ್ನು ನಂಬದ ಪ್ರೋ. ಭಗವಾನ್ ತನ್ನ ಹೆಸರನ್ನು ಪ್ರೊ. ಸೈತಾನ್ ಎಂದು ಬದಲಿಸಲಿ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.good