ವ್ಯಾಪಾರ ಮತ್ತು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಮಾಲೋಚನೆ
ಇದು ಆಂತರಿಕ ಸಮಾಲೋಚನೆಯಾಗಿದ್ದು, ಲಭ್ಯ ಮಾಹಿತಿ ಪ್ರಕಾರ ಕಸ್ಟಂಸ್ ಅಧಿಕಾರಿಗಳು ಈ ಸಭೆಯನ್ನು ಆಯೋಜಿಸಿದ್ದರು. ಕೇಂದ್ರ ಸರಕಾರ ಈ ಯುದ್ಧ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಇಸಿಎಲ್ ಜಿಎಸ್(ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ) ಅಡಿಯಲ್ಲಿ ಯಾವುದೇ ಗ್ಯಾರಂಟಿ, ಅಡಮಾನ ಇಲ್ಲದೆ ಸಾಲದ ನೆರವು ಯೋಜನೆ ಘೋಷಿಸಿದ್ದರೂ, ಇದಕ್ಕೆ ನಮ್ಮ ರಾಜ್ಯದಲ್ಲಿ ಅನೇಕ ಬ್ಯಾಂಕ್‌ಗಳು ಆಸ್ತಿ ಲಿಂಕ್ ಮಾಡುವ ಮೂಲಕ ಉದ್ಯಮಿಗಳಿಗೆ ಹೊರೆಯಾಗುತ್ತಿರುವುದನ್ನು ಗಮನಕ್ಕೆ ತಂದರು.
ಈ ಕುರಿತು ಸಚಿವರು, ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳ ಇಂತಹ ಕ್ರಮ ಸಹಿಸುವುದಿಲ್ಲ, ಈ ಕುರಿತು ಹೆಚ್ಚಿನ ಮಾಹಿತಿ ಪಡೆದು ಸ್ಪಷ್ಟ ಸೂಚನೆ ನೀಡಲಾಗುವುದು ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಸಿಬಿಐಸಿ ಅಧ್ಯಕ್ಷ ವಿವೇಕ್ ಚತುರ್ವೇದಿ ಮತ್ತು ಸಿಬಿಐಸಿ ಸದಸ್ಯ ಯೋಗೇಂದ್ರ ಗರ್ಗ್, ಉದ್ಯಮಿಗಳು, ನಗರದ ಕೆಲವು ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಎನ್‌ಎಂಪಿಎಗೆ ಭೇಟಿ:
ನವಮಂಗಳೂರು ಬಂದರಿಗೆ ಭೇಟಿ ನೀಡಿದ ಸಚಿವೆ ನಿರ್ಮಲಾ, ಅಲ್ಲಿನ ಚಟುವಟಿಕೆಗಳು, ಮೂಲಸೌಕರ್ಯ ಇತ್ಯಾದಿಗಳ ಪರಿಶೀಲನೆ ನಡೆಸಿದರು.