ಕುರ್ನಾಡು ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಉದ್ಘಾಟನೆ

ಕುರ್ನಾಡು ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಉದ್ಘಾಟನೆ


ಮಂಗಳೂರು: ಉಳ್ಳಾಲ ತಾಲೂಕಿನ ಕುರ್ನಾಡು ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ವಿಭಾಗವನ್ನು ಜೂ.16 ರಂದು ಶಾಲಾ ಪುಟಾಣಿಗಳು ಮತ್ತು ಪೋಷಕರು ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅದ್ಯಕ್ಷ ದೇವದಾಸ ಭಂಡಾರಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಶಾಲೆಯು ಉತ್ತಮ ವಾತಾವರಣ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಬದ್ಧವಾಗಿದೆ ಎಂದು ತಿಳಿಸಿದರು.


ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಆರಂಭಿಸಲಾದ ಈ ವಿಭಾಗದ ಮೂಲಕ ಪುಟಾಣಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ಶಾಲಾ ಆಡಳಿತ ಮಂಡಳಿ ವ್ಯಕ್ತಪಡಿಸಿತು.

ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಗಣೇಶ ನಾಯಕ್ ಕುರ್ನಾಡು ಗುತ್ತು, ಪ್ರಶಾಂತ್ ಕಾಜವ, ರಾಜೇಶ್ ಶೆಟ್ಟಿ, ನಾಗರಾಜ ಭಟ್, ಪಂಚಾಯತ್ ಸದಸ್ಯ ಅಶ್ರಫ್ ಕುರ್ನಾಡು ನಾರಾಯಾಣ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಾಥ್ ಶೆಟ್ಟಿ, ಚಂದ್ರಹಾಸ ಪೂಜಾರಿ ,ಶಾಲಾ ಮುಖ್ಯೋಪಾದ್ಯಾಯಿನಿ ವಸಂತಿ, ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ವಿಲ್ಮಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾದ್ಯಾಯಿನಿ ವಸಂತಿ ಸ್ವಾಗತಿಸಿ, ಸವಿತಾ ಭಟ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article