ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ


ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಕ್ರೀಡಾ ಭಾರತಿ ಮಂಗಳೂರು ಮತ್ತು ಶಕ್ತಿ ವಿದ್ಯಾ ಸಂಸ್ಥೆಯ ಸಹಾಭಾಗಿತ್ವದಲ್ಲಿ ಸಾಮೂಹಿಕವಾಗಿ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಅರ್ಥ ಪೂರ್ಣವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೆನಪೋಯ ವಿಶ್ವವಿದ್ಯಾನಿಲಯ ಮಂಗಳೂರು ಇಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯರಾಗಿರುವ ಐಶ್ವರ್ಯ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ವಿಶ್ವದಲ್ಲಿ 177ಕ್ಕೂ ಹೆಚ್ಚಿನ ದೇಶಗಳು ಈ ಯೋಗದಿನಾಚರಣೆಯನ್ನು ಆಚರಿಸುತ್ತಿವೆ. ನಮ್ಮ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರ ನಿರ್ಧಾರದಿಂದ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಯೋಗ ಇಂದು ವಿಶ್ವವೇ ಆಚರಿಸುವಂತೆ ಆಗಿದೆ ಎಂದು ಹೇಳಿದರು.


ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಅಂದರೆ ನಾವು ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಾದ ನಾವು ನಮ್ಮ ದಿನನಿತ್ಯ ಜೀವನದಲ್ಲಿ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು. ಪ್ರತಿ ದಿನ ಪ್ರಯತ್ನದೊಂದಿಗೆ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗುವ ಹಾಗೆ ದಿನನಿತ್ಯ ಯೋಗಭ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಎಂದರು.


ದೈಹಿಕ ದೃಢತೆ ಇರುತ್ತದೆ. ವಿದ್ಯಾರ್ಥಿಯಲ್ಲಿ ಇರಬೇಕಾದ ಮುಖ್ಯ ಲಕ್ಷಣ ಅಂದರೆ ಕಾಗೆಯ ಬುದ್ಧಿ, ಕೊಕ್ಕರೆಯ ಚುರುಕುತನ, ಶ್ವಾನದ ನಿದ್ರೆ, ಮಿತವಾದ ಆಹಾರ ಸೇವನೆ, ಹೀಗೆ ಈ ಲಕ್ಷಣಗಳು ವಿದ್ಯಾರ್ಥಿಯಲ್ಲಿರಬೇಕು. ಒಬ್ಬ ಸಾಧಕ ವಿದ್ಯಾರ್ಥಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಈ ಶಕ್ತಿ ವಿದ್ಯಾ ಸಂಸ್ಥೆಯು ಒದಗಿಸುತ್ತಾ ಬರುತ್ತಿದೆ. ಮಕ್ಕಳು ಚೆನ್ನಾಗಿ ವಿದ್ಯಾರ್ಜನೆಯನ್ನು ಮಾಡಿ ಸಂಸ್ಥೆಗೆ ಮತ್ತು ಹೆತ್ತವರಿಗೆ ಒಳ್ಳೆಯ ಕೀರ್ತಿ ತರುವಂತಾಗಲಿ ದೇಶದ ಸಂಪತ್ತಾಗಲಿ ಎಂದು ಶುಭ ಹಾರಸಿದರು.


ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಶಕ್ತಿ ವಿದ್ಯಾ ಸಂಸ್ಥೆಯ ವಸತಿ ನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗಿನ ಅವಧಿಯಲ್ಲಿ ಪ್ರತಿನಿತ್ಯವು ಯೋಗಾವನ್ನು ಅಭ್ಯಾಸ ಮಾಡುತ್ತಾರೆ. ಇದರಿಂದ ಅವರ ಕಲಿಯುವಿಕೆ ಈ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳಿದರು. 


ಪ್ರತಿ ವರ್ಷವು ಕ್ರೀಡಾ ಭಾರತಿ ಸಹಕಾರದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ರಥ ಸಪ್ತಮಿ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವುದು ಶಾಷ್ಣನೀಯವಾಗಿದೆ. ಅಂತರಾಷ್ಟ್ರೀಯ ಯೋಗಾ ದಿನಾಚರಣೆಯಿಂದ ನಾವು ದಿನನಿತ್ಯ ಯೋಗವನ್ನು ಅಭ್ಯಾಸ ಮಾಡಬೇಕೆಂದು ಅವರು ಹೇಳಿದರು.


ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 5ನೇ ತರಗತಿಯಿಂದ ಪಿಯುಸಿ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಏಕಕಾಲದಲ್ಲಿ ಪವನ ಮುಕ್ತಸನ, ಮಕರಾಸನ, ತಾಡಾಸನ, ಭುಜಂಗಾಸನ, ವೃಕ್ಷಾಸನ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಯೋಗಾಭ್ಯಾಸವನ್ನು ನಡೆಸಿದರು. 


ಯೋಗ ತರಬೇತುದಾರರಾದ ವೀಣಾ ಮತ್ತು ಸುಭದ್ರಾ ಅವರು ಯೋಗಭ್ಯಾಸದ ತರಬೇತಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕ್ರೀಡಾಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಇದರ ಉಪಾಧ್ಯಕ್ಷ ಕರಿಯಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಭಾರತಿ ಕರ್ನಾಟಕ, ದಕ್ಷಿಣ ಪ್ರಾಂತ ಇದರ ಆತ್ಮ ರಕ್ಷಕ ಪ್ರಮುಖ್ ಆಗಿರುವ ಎ. ಕೃಷ್ಣ ಶೆಟ್ಟಿ ತಾರೆಮಾರ್ ಉಪಸ್ಥಿತರಿದ್ದರು.

ದೇಲಂಪಾಡಿ ಯೋಗ ಪ್ರತಿಷ್ಠಾನದ ಸದಸ್ಯರು ಮತ್ತು ಯೋಗ ತರಬೇತುದಾರರಾದ ವೀಣಾ ಮತ್ತು ಸುಭದ್ರಾ ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ಸುರೇಖಾ ಭಟ್ ಸ್ವಾಗತಿಸಿದರು ಕನ್ನಡ ಶಿಕ್ಷಕರಾದ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article