ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದ ವಾಷಿ೯ಕೋತ್ಸವ, ಸಾಧಕ ವಿದ್ಯಾಥಿ೯ಗಳಿಗೆ ಸನ್ಮಾನ, ಪುಸ್ತಕ ವಿತರಣೆ
ಆಳ್ವಾಸ್ ಇಂಜಿನಿಯರ್ ಕಾಲೇಜಿನ ಪ್ರಾದ್ಯಾಪಕ ಡಾ. ಶಶಿಕಾಂತ್ ಕರಿಂಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾಕ೯ಳ ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಭಂಡಾರಿ ಜೋಡುಕಟ್ಟೆ, ಬಾಕೂ೯ರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಮಾಜಿ ಅಧ್ಯಕ್ಷ ಶಶಿಧರ್ ಕಾಕ೯ಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದ ನಿ. ಪೂ. ಅಧ್ಯಕ್ಷ ಯೋಗೀಶ್ ಭಂಡಾರಿ, ಗೌರವಾಧ್ಯಕ್ಷರುಗಳಾದ ವಾಸುದೇವ ಭಂಡಾರಿ, ವಸಂತಿ ಜೆ. ಭಂಡಾರಿ, ಶಾಂತಾ ಕೆ. ಭಂಡಾರಿ, ಸುಮಿತ್ರ ಭಂಡಾರಿ ಕಾನ, ಕಾಯ೯ದಶಿ೯ ಪ್ರವೀಣ್ ಭಂಡಾರಿ ಉಪಸ್ಥಿತರಿದ್ದರು.
ಪ್ರಶಾಂತ್ ಭಂಡಾರಿ ಪುತ್ತಿಗೆ ಸ್ವಾಗತಿಸಿದರು. ಕೆ.ಎನ್. ಪ್ರಕಾಶ್ ಭಂಡಾರಿ ವಿಜ್ಞಾಪನಾ ಪತ್ರ ವಾಚಿಸಿದರು. ಸತೀಶ್ ಭಂಡಾರಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾಯ೯ಕ್ರಮದ ಮೊದಲು ಸತ್ಯನಾರಾಯಣ ಪೂಜೆ, ಬನ್ನಡ್ಕ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ, ಅರಶಿನ ಕುಂಕುಮ ಕಾಯ೯ಕ್ರಮ ಹಾಗೂ ನಂತರ ಭಂಡಾರಿ ಕಲಾವಿದರು ಬೆದ್ರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿ. ಸುರೇಂದ್ರ ಕುಮಾರ್ ಕಲತ್ರಪಾದೆ ವಿರಚಿತ, ಸತೀಶ್ ಭಂಡಾರಿ ಕರಿಂಜೆ ನಿದೇ೯ಶನದ ಸಾಮಾಜಿಕ ಹಾಸ್ಯ ತುಳು ನಾಟಕ "ತುಂಗಾ ಭದ್ರಾ" ಪ್ರದಶ೯ನಗೊಂಡಿತು.

