ಬೆಳುವಾಯಿ ಚರ್ಚ್ ಬಳಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಛತ್ರಿ ವಿತರಣೆ

ಬೆಳುವಾಯಿ ಚರ್ಚ್ ಬಳಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಛತ್ರಿ ವಿತರಣೆ


ಮೂಡುಬಿದಿರೆ: ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಬೆಳುವಾಯಿ ಚರ್ಚ್ ಬಳಿ ಇಲ್ಲಿನ ಮಕ್ಕಳಿಗೆ ಕಲಿಕೆಗೆ ಪೂರಕವಾದ ನೋಟ್ ಪುಸ್ತಕ ಮತ್ತು ಛತ್ರಿಗಳನ್ನು ಮಯೂರಿ ಸಿಲ್ಕ್ಸ್ ಮೂಡುಬಿದಿರೆ ಇದರ ವತಿಯಿಂದ ಉಚಿತವಾಗಿ ನೀಡಲಾಯಿತು. 


ರೂ.7000 ಮೌಲ್ಯದ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಹಾಗೂ ಹಳೆ ವಿದ್ಯಾರ್ಥಿಯಾದ‌  ಸುಧೀರ್ ಇವರು ಎಲ್ಲಾ ಮಕ್ಕಳಿಗೆ  25,000 ರೂ. ಮೌಲ್ಯದ ಛತ್ರಿಯನ್ನು ಕೊಡುಗೆಯಾಗಿ ನೀಡಿದರು.

ಎಸ್.ಡಿ.ಎಂ.ಸಿ.ಅಧ್ಯಕ್ಷ  ಗಣಪತಿ ಪೈ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಯೂರಿ ಸಿಲ್ಕ್ಸ್ ನ  ಮಾಲಕಿ  ಪದ್ಮಲತಾ ಅವರು ಮಾತನಾಡಿ  ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣವನ್ನು ಪೋಷಕರು ಮನೆಯಲ್ಲಿ ಒದಗಿಸಬೇಕು ಹಾಗೂ ನೀಡಿದ ಪುಸ್ತಕಗಳ ಮೌಲ್ಯವನ್ನು ಅರಿತು  ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.

ಕೊಡುಗೆ ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಡಿ.ಎಂ.ಸಿ ಉಪಾಧ್ಯಕ್ಷೆ ವಿದ್ಯಾ ,ನಿವೃತ್ತ ಮುಖ್ಯೋಪಾಧ್ಯಾಯರಾದ  ವೆಂಕಟೇಶ್, ಎನ್ ,ಮಯೂರಿ ಸಿಲ್ಕ್ಸ್ ನ ಸಿಬ್ಬಂದಿಗಳು  ಸಹಶಿಕ್ಷಕಿ  ವಿನಯ,ಗೌರವ ಶಿಕ್ಷಕಿಯರಾದ  ಪ್ರಜ್ಞಾ ಹಾಗೂ ಜೆನಿಟಾ ಆಸ್ಮಾ ಮತ್ತು ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ   ಸುರೇಂದ್ರ ಪೂಜಾರಿ ಸ್ವಾಗತಿಸಿದರು.  ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article