ಪದ್ಮಾವತಿ ಜೈನ ಸಮುದಾಯ ಭವನ ಲೋಕಾಪ೯ಣೆ

ಪದ್ಮಾವತಿ ಜೈನ ಸಮುದಾಯ ಭವನ ಲೋಕಾಪ೯ಣೆ


ಮೂಡುಬಿದಿರೆ: ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ಪುತ್ತಿಗೆಯ ಚಿಟ್ಟೆಮಾರ್ ನಲ್ಲಿ ನಿಮಾ೯ಣಗೊಂಡಿರುವ ಪದ್ಮಾವತಿ ಜೈನ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು. 


ಮೂಡುಬಿದಿರೆ ಜೈನ ಮಠದ ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತಿ೯ ಪಂಡಿತಾಚಾಯ೯ವಯ೯ ಸ್ವಾಮೀಜಿ ಸಮುದಾಯ ಭವನವನ್ನು ಲೋಕಾಪ೯ಣೆಗೊಳಿಸಿ ಶುಭ ಹಾರೈಸಿದರು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ.,  ಬಿಜೆಪಿ ಮುಖಂಡ ಕೆ. ಪಿ. ಜಗದೀಶ ಅಧಿಕಾರಿ, ಉದ್ಯಮಿ ಶ್ರೀಪತಿ ಭಟ್, ಪುತ್ತಿಗೆ  ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅಚ೯ಕ ವೇ. ಮೂ. ಅಡಿಗಳ್ ಅನಂತಕೃಷ್ಣ ಭಟ್, ಅರಮಲೆಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಮೋಕ್ತೇಸರ ಸುಖೇಶ್ ಕುಮಾರ್ ಜೈನ್ ಕಡಂಬು, ಎಂ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಪುತ್ತಿಗೆ ಸಹಕಾರಿ ಸಂಘದ ಅಧ್ಯಕ್ಷ  ಕೆ. ಪಿ. ಸುಚರಿತ ಶೆಟ್ಟಿ, ಡಾ.ಯೋಗಿ ಸುಧಾಕರ ತಂತ್ರಿ ಸಂಪಿಗೆ, ಪುತ್ತಿಗೆ ಶ್ರೀ ಗುರುರಾಘವೇಂದ್ರ ಮಂದಿರದ ಭಾರತಿ ಕೋಟ್ಯಾನ್ ಮತ್ತು ಪ್ರಕಾಶ್, ವಕೀಲರು ಹಾಗೂ ನೋಟರಿ ಶ್ವೇತಾ ಜೈನ್, ರಶ್ಮಿತಾ, ಪುತ್ತಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ನವೀನ್ ಚಂದ್ರ ಹೆಗ್ಡೆ, ಕಾಯ೯ದಶಿ೯ ಸುನೀಶ್ ಕುಮಾರ್ ಜೈನ್ ಕಡಂಬು ಉಪಸ್ಥಿತರಿದ್ದರು. 

ಪುತ್ತಿಗೆ ಸಮ್ಯಕ್ ಕ್ಲಿನಿಕ್ ನ ಡಾ. ಅನುಷಾ ನಾಗವಮ೯ ಸ್ವಾಗತಿಸಿದರು. ವಿನಯ್ ಕಾಯ೯ಕ್ರಮ ನಿರೂಪಿಸಿದರು.ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ನಾಗವಮ೯ ಜೈನ್ ವಂದಿಸಿದರು.

ಸಭಾ ಕಾಯ೯ಕ್ರಮದ ನಂತರ ಸುದೇಶ್ ಜೈನ್ ಸಂಯೋಜನೆಯಲ್ಲಿ ಮಂಗಳೂರು ಮಕ್ಕಿಮನೆ ಕಲಾವೃಂದ ಬಳಗದವರಿಂದ ಜಿನ ಭಜನಾ ಕಾಯ೯ಕ್ರಮ ಮತ್ತು ವೈವಿದ್ಯತೆಯ ಸಾಂಸ್ಕೃತಿಕ ಕಾಯ೯ಕ್ರಮ ಪ್ರಸ್ತುತಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article