ಮೂಡುಬಿದಿರೆ: ಬೆಳುವಾಯಿ ಗ್ರಾಮದ ಕುಕ್ಕಿನಾಡಿ ನಿವಾಸಿ, ಕೃಷಿಕ ರತ್ನಾಕರ ಪೂಜಾರಿ (56) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ದೈವಗಳ ಪರಿಚಾರಕರಾಗಿದ್ದ ಅವರು ಬೆಳುವಾಯಿ ನಡ್ಡೋಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕೋಟಿಬೈದ್ಯ ದೈವಕ್ಕೆ ಮುಕ್ಕಾಲ್ದಿಯಾಗಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.