ಮೂಡುಬಿದಿರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ: ಮಳೆಗಾಲದಲ್ಲಿ ಹೆಚ್ಚಿನ ಲೈನ್ ಮೆನ್ ಗಳನ್ನು ಒದಗಿಸಲು ಸಾವ೯ಜನಿಕರ ಒತ್ತಾಯ

ಮೂಡುಬಿದಿರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ: ಮಳೆಗಾಲದಲ್ಲಿ ಹೆಚ್ಚಿನ ಲೈನ್ ಮೆನ್ ಗಳನ್ನು ಒದಗಿಸಲು ಸಾವ೯ಜನಿಕರ ಒತ್ತಾಯ


ಮೂಡುಬಿದಿರೆ: ಮಳೆಗಾಲದಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿದ್ದು ಇದರಿಂದಾಗಿ ಕರೆಂಟ್ ನ ಸಮಸ್ಯೆ ಉಂಟಾಗುತ್ತದೆ. ಸಿಬಂದಿಗಳ ಕೊರತೆಯಿರುವುದರಿಂದ ತಕ್ಷಣ ವಿದ್ಯುತ್ ಕಾಮಗಾರಿ ನಡೆಸಲು ಸಾಧ್ಯವಾಗದೆ ವಿಳಂಬವಾಗುತ್ತದೆ ಆದ್ದರಿಂದ ಹೆಚ್ಚಿನ ಲೈನ್ ಮ್ಯಾನ್ ಗಳನ್ನು ನೀಡುವಂತೆ ಸಾವ೯ಜನಿಕರು ಮೆಸ್ಕಾಂ ಜನ ಸಂಪಕ೯ ಸಭೆಯಲ್ಲಿ ಒತ್ತಾಯಿಸಿದ್ದಾರೆ. 

ಮೂಡುಬಿದಿರೆ ಉಪವಿಭಾಗದ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಬುಧವಾರ ಉಪವಿಭಾಗದ ಕಛೇರಿಯಲ್ಲಿ ನಡೆದ "ಜನ ಸಂಪಕ೯ ಸಭೆ"ಯಲ್ಲಿ ಈ ಬಗ್ಗೆ ಮಾತನಾಡಿದ ರಾಜೇಶ್ ಕಡಲಕೆರೆ, ಕ್ಲಾರಿಯೋ ಡಿಸೋಜಾ, ಅಲ್ವಿನ್ ಮಿನೇಜಸ್, ಯೋಗೀಶ್ ಶೆಟ್ಟಿ ಹಾಗೂ ವಿಲ್ಫ್ರೆಡ್ ಮೆಂಡೊನ್ಸಾ ಅವರು ಮೆಸ್ಕಾಂ ಸುಪರಿಡೆಂಟ್ ಎಂಜಿನಿಯರ್ ಕೃಷ್ಣರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. 

ಮೂಡುಬಿದಿರೆಯಲ್ಲಿ ಲೈನ್ ಮ್ಯಾನ್ ಗಳು ಅನಧಿಕೃತ ಗುತ್ತಿಗೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ನವೀನ್ ಕರ್ಕೇರ ಹಾಗೂ ಅನೀಶ್ ಡಿಸೋಜಾ ಅವರು ಅಧಿಕಾರಿಗಳ ಗಮನಕ್ಕೆ ತಂದರು. 

ಪಡುಮಾರ್ನಾಡ್ ವಿದ್ಯುತ್ ಸಮಸ್ಯೆ ಬಗ್ಗೆ ರಮೇಶ್ ಶೆಟ್ಟಿ ಪಡುಮಾನಾ೯ಡು,   ಕೊಡಂಗಲ್ಲು  ಅಸುಪಾಸಿನಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಬಗ್ಗೆ ಕ್ಲಾರಿಯೋ  ಡಿಸೋಜಾ , ಜಗದೀಶ್ ಹಾಗೂ ಸತೀಶ್ ಕೋಟ್ಯಾನ್ ತಿಳಿಸಿದರು. 

ಗಂಟಾಲ್ ಕಟ್ಟೆಯಲ್ಲಿರುವ ಫೀಡರ್ ನ್ನು ಚೇಂಜ್ ಮಾಡಬೇಕೆಂದು, ಮುಂದಿನ ಮೆಸ್ಕಾಂ ಜನಸಂಪರ್ಕ ಸಭೆಗೆ ಮೆಸ್ಕಾಂ ಎಂಡಿ ಬರಬೇಕು ಇಲ್ಲದಿದ್ದರೆ ಜನ  ಸಂಪಕ೯ ಸಭೆ ನಡೆಸುವುದೇ ಬೇಡ ಎಂದು ಸಾವ೯ಜನಿಕರು ಮನವಿ ಮಾಡಿದರು. 

ಅಸಿಸ್ಟೆಂಟ್ ಎಕ್ಸಿಕ್ಯೂಟ್ ಎಂಜಿನಿಯರ್ ಮೋಹನ್, ಎಕ್ಸಿಕ್ಯೂಟ್ ಎಂಜಿನಿಯರ್ ಉಪಸ್ಥಿತರಿದ್ದರು. 

ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪ್ರಮುಖರಾದ ಸುದೇವ ನಾಯಕ್ , ಸಂದೀಪ್ ಅಲಂಗಾರ್ ತುಕ್ರಪ್ಪ ಕೆಂಬಾರೆ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article