ಮೂಡುಬಿದಿರೆ ತಾಲೂಕಿನಲ್ಲಿ ಶಾಲಾ ಆರಂಭೋತ್ಸವ: ಪುಸ್ತಕ ವಿತರಣೆ
ಈ ಸಂದಭ೯ದಲ್ಲಿ ಕೆಸರ್ ಗದ್ದೆಯ ದಾನಿ ವಿಶ್ವನಾಥ ಅವರು ಸುಮಾರು 450 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ಹಾಗೂ ಸರಕಾರದಿಂದ ಬಂದಿರುವ ಸಮವಸ್ತ್ರಗಳನ್ನು ವಿತರಿಸಲಾಯಿತು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಿತೇಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ರಾಜಶ್ರೀ ನಾಯಕ್, ಎಸ್. ಡಿ. ಎಂ. ಸಿ ಅಧ್ಯಕ್ಷ ವಿಜಯ ಕೋಟ್ಯಾನ್, ಮಾಜಿ ಅಧ್ಯಕ್ಷ ನಾರಾಯಣ ಕೋಟ್ಯಾನ್, ಬೆಳುವಾಯಿ ಗ್ರಾ.ಪಂ. ಮಾಜಿ ಸದಸ್ಯ ರಘು, ಹಳೆ ವಿದ್ಯಾಥಿ೯ ಸಂಘದ ಕಾಯ೯ದಶಿ೯ ಅವರು ಪ್ರವೀಣ್ ಭಂಡಾರಿ, ನಿವೃತ್ತ ಶಿಕ್ಷಕ ದೇವಾನಂದ ಕಿಣಿ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕಿಯರಾದ ಸೀಮಾ ನಾಯಕ್, ಸುವಣಿ೯ ಮತ್ತು ಅರುಣಾ ಶೆಟ್ಟಿ ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು:
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಪಡುಮಾರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿ ಚೌಟ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಉಳಿಸಿ ಬೆಳೆಸುವ ಕಡೆ ಗಮನ ಹರಿಸಬೇಕು ಎಂದು ಪಿಡಿಒ ಕಿವಿಮಾತು ಹೇಳಿದರು.
ಶಾಲಾ ಸ್ಥಾಪಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಪೈ ವಿದ್ಯಾರ್ಥಿಗಳಿಗೆ ಸರಕಾರದಿಂದ ಒದಗಿಸಲಾದ ಪಠ್ಯಪುಸ್ತಕಗಳನ್ನು ವಿತರಿಸಿದರು.
ನಿಕಟ ಪೂರ್ವ ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.
ಗೌರವ ಶಿಕ್ಷಕಿ ಪ್ರತಿಭಾ ಮತ್ತು ಸ್ವಯಂಸೇವಕ ಪ್ರಜ್ವಲ್ ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಮತ್ತು ಪೋಷಕರು ಹಾಜರಿದ್ದರು.
ಪ್ರಭಾರ ಮುಖ್ಯ ಶಿಕ್ಷಕ ಪ್ರಸನ್ನ ವಿ. ಶೆಣೈ ಸ್ವಾಗತಿಸಿದರು. ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು.
ತೋಡಾರು ನವಚೇತನ ಸೇವಾ ಬಳಗದಿಂದ ಪಡುಮಾರ್ನಾಡು ಮಹಾವೀರ ಶಾಲೆಗೆ ಪುಸ್ತಕ ವಿತರಣೆ
ಪಡುಮಾರ್ನಾಡಿನ ಮಹಾವೀರ ಹಿರಿಯ ಪ್ರಾಥಮಿಕ ಶಾಲೆ ಅಮನಬೆಟ್ಟು ಇಲ್ಲಿನ ಒಂದರಿಂದ ಏಳನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 15,000 ವೆಚ್ಚದ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ತೋಡಾರಿನ ನವಚೇತನ ಸೇವಾ ಬಳಗದವರು ವಿತರಿಸಿದರು.
ಶಾಲಾ ಟ್ರಸ್ಟಿ, ಭೂ ನ್ಯಾಯ ಮಂಡಳಿ ಸದಸ್ಯ ರಮೇಶ್ ಎಸ್ ಶೆಟ್ಟಿ ಅಧ್ಯಕ್ಷತೆ ವಹಿಸಿ 2026-27 ರ ಶಾಲಾ ಶೈಕ್ಷಣಿಕ ವರ್ಷ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪಡುಮಾರ್ನಾಡು ಯುವಕ ಮಂಡಲದ ಅಧ್ಯಕ್ಷರಾದ ಭರತ್ ಕೆ ಶೆಟ್ಟಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಜಯ ಬಿ, ಶಾಲಾ ಹಿತೈಷಿ ಸಂಧ್ಯಾ ವಿ ಹೆಗ್ಡೆ, ಅಹಿಂಸಾ ಚಾರಿಟೇಬಲ್ ಟ್ರಸ್ಟ್ ನ ವರ್ಧಮಾನ ಜೈನ್, ನವಚೇತನ ಸೇವಾ ಬಳಗದ ಅಧ್ಯಕ್ಷರಾದ ದಾಮೋದರ ಮಿಜಾರು, ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಸದಸ್ಯರಾದ ಕಿರಣ್, ದಿನಕರ ಮಾರ್ನಾಡ್, ಪೂರ್ಣಿಮಾ, ಸುನೀಲ್ ಅಂಚನ್, ಮಂಜುನಾಥ ಬೈಪಾಸ್ ,ದಿನಕರ ಪೂಜಾರಿ ಮಿಜಾರ್ , ವಿಜಯ ದರಗುಡ್ಡೆ, ದೇವಿಕಾ ಪ್ರಸಾದ್ ಉಪಸ್ಥಿತರಿದರು.
ಮುಖ್ಯ ಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಸಹಶಿಕ್ಷಕಿ ಸುನೀತಾ ವಂದಿಸಿದರು.

