ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆ
Sunday, June 14, 2026
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಶ್ರವಣೇಶ್ ಮತ್ತು ಅಭಿತ್ ಇವರು ಅಗ್ನಿವೀರ್ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿರುತ್ತಾರೆ.
ಶ್ರವಣೇಶ್ ತಮ್ಮ ಮುಂದಿನ ತರಬೇತಿಯನ್ನು ಹೈದರಾಬಾದ್‌ನ ಸೇನಾ ತರಬೇತಿ ಕೇಂದ್ರದಲ್ಲಿ ಪಡೆದುಕೊಳ್ಳಲಿದ್ದಾರೆ. ಇವರು ಪುಣಚ ಗ್ರಾಮದ ಅಜೇರು ಅಣ್ಣು ಪೂಜಾರಿ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರ. ಅಭಿತ್ ತಮ್ಮ ಮುಂದಿನ ತರಬೇತಿಯನ್ನು ಸಿ.ಪಿ.ಎಂ ತರಬೇತಿ ಕೇಂದ್ರ ಬೆಂಗಳೂರು ಇಲ್ಲಿ ಪಡೆದುಕೊಳ್ಳಲಿದ್ದಾರೆ. ಇವರು ಮೊಟ್ಟೆತಡ್ಕ ಅನಿಲ್ ಕುಮಾರ್ ಮತ್ತು ಅನಿತಾ ದಂಪತಿಗಳ ಪುತ್ರ.
ದೇಶ ಸೇವೆಗೆ ಆಯ್ಕೆಯಾದ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಾ ಸಂಸ್ಥೆಯ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ-ಉಪನ್ಯಾಸಕೇತರ ವೃಂದದವರ ವತಿಯಿಂದ ಸನ್ಮಾನಿಸಿ, ಅಭಿನಂದನೆಯನ್ನು ಸಲ್ಲಿಸಲಾಯಿತು.