ಹಿಂದೂ ಹಿ.ಪ್ರಾ. ಶಾಲೆ: ರಕ್ತ ವರ್ಗೀಕರಣ ಶಿಬಿರ
Tuesday, June 16, 2026
ಶಿರ್ವ: ಕಟಪಾಡಿ ಜೇಸಿಐ ಪ್ರಾಯೋಜಕತ್ವದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷಂಪ್ರತಿ ಜರುಗುವ ವಿದ್ಯಾರ್ಥಿಗಳ ರಕ್ತ ವರ್ಗೀಕರಣ ಶಿಬಿರವು ಮಂಗಳವಾರ ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಜರುಗಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ್, ಸಂಚಾಲಕರಾದ ಸುರೇಶ್ ಶೆಣೈ, ಆಡಳಿತ ಮಂಡಳಿ ಸದಸ್ಯ ಕೃಷ್ಣ ಕುಮಾರ್ ರಾವ್ ಮಟ್ಟು, ಗಣೇಶ್ ಕುಮಾರ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನವೀನ್ ಅಮೀನ್, ರವಿಕಿರಣ್ ಪಾಠಕ್, ಕಾರ್ಯಕ್ರಮದ ಪ್ರಾಯೋಜಕರಾದ ಕಟಪಾಡಿ ಜೇಸಿಐ ಪೂರ್ವಾಧ್ಯಕ್ಷ ಪ್ರಶಾಂತ್ ಆರ್.ಎಸ್., ಮಹೇಶ್ ಅಂಚನ್, ಸುಕುಮಾರ್ ಅಂಬಾಡಿ, ಕಾರ್ಯದರ್ಶಿ ಗೌರವ್, ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಹಿ ರತ್ನಾಕರ್, ಶಾಲಾ ಮುಖ್ಯ ಶಿಕ್ಷಕಿ ಅನುರಾಧಾ ಶೆಟ್ಟಿ, ಆಸ್ಪತ್ರೆಯ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.