ಉಜಿರೆ ಎಸ್‌ಡಿಎಂ ಅ.ಹಿ.ಪ್ರಾ ಶಾಲೆಯಲ್ಲಿ ಯೋಗ ಶಿಬಿರ ಉದ್ಘಾಟನೆ
Tuesday, June 16, 2026
ಉಜಿರೆ: ಜೂ.21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಒಂದು ವಾರದ ಯೋಗ ತರಬೇತಿ ಶಿಬಿರವನ್ನು ಜೂ.16 ರಂದು ಉಜಿರೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಜಿರೆ ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜಿನ ವೈದ್ಯಶಾಸ್ತ್ರದ ಉಪನ್ಯಾಸಕಿ ಡಾ. ರೆನಿತಾ ಮಾತನಾಡಿ, ಯೋಗ ಎಂಬುದು ಅತ್ಯಂತ ಪ್ರಾಚೀನ ಅಭ್ಯಾಸವಾಗಿದ್ದು, ಮನುಷ್ಯನ ಆರೋಗ್ಯಕರ ಜೀವನ ಸಾಗಿಸಲು ಇರುವ ಸುಲಭ ಮಾರ್ಗ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ ಮಾತನಾಡಿ, ಮಕ್ಕಳಲ್ಲಿ ಏಕಾಗ್ರತೆ ಬರಲು ಯೋಗ ಸಹಕಾರಿಯಾಗಿದೆ, ಒಂದು ವಾರಗಳ ಕಾಲ ನಡೆಯಲಿರುವ ಶಿಬಿರ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಅನಘಾ ಭಟ್ ಹಾಗೂ ಸಾನಿಕ ಉಪಸ್ಥಿತರಿದ್ದು, ಮಕ್ಕಳಿಗೆ ಯೋಗಾಭ್ಯಾಸ ತರಬೇತಿ ನೀಡಿದರು.
ಶಾಲಾ ಸಹ ಶಿಕ್ಷಕಿಯರಾದ ಗೀತಾ ಸ್ವಾಗತಿಸಿ, ರೇವತಿ ವಂದಿಸಿದರು. ಧೈಹಿಕ ಶಿಕ್ಷಕ ಪ್ರಜ್ವಲ್ ನಿರೂಪಿಸಿದರು.