ಮದ್ಯಪಾನ ಆತಂಕ ಮತ್ತು ಖಿನ್ನತೆಯನ್ನು ಉಂಟುಮಾಡುವ ಪಾನೀಯ: ಡಾ. ಡಿ. ವೀರೇಂದ್ರ ಹೆಗ್ಗಡೆ

ಮದ್ಯಪಾನ ಆತಂಕ ಮತ್ತು ಖಿನ್ನತೆಯನ್ನು ಉಂಟುಮಾಡುವ ಪಾನೀಯ: ಡಾ. ಡಿ. ವೀರೇಂದ್ರ ಹೆಗ್ಗಡೆ


ಉಜಿರೆ: ದುಶ್ಚಟದಿಂದ ದೂರವಿದ್ದಾಗ ಸಂಸಾರದಲ್ಲಿ ಹಾಗೂ ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರು ಇಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ 272ನೇ ವಿಶೇಷ ಮದ್ಯವರ್ಜನ ಶಿಬಿರದ 78 ಮಂದಿ ಶಿಬಿರಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾರ್ಗದರ್ಶನ ನೀಡಿ, ಮದ್ಯಪಾನ ಒಳ್ಳೆಯದಲ್ಲ ಇದು ಮನುಷ್ಯನ ಪಂಚೇಂದ್ರಿಯಗಳಿಗೆ ತೊಡಕನ್ನು ಉಂಟು ಮಾಡುತ್ತದೆ. ಮನುಷ್ಯನಿಗೆ ಕೆಟ್ಟ ವಸ್ತುಗಳ ಮೇಲೆ ಆಕರ್ಷಣೆ ಜಾಸ್ತಿ ಕೆಟ್ಟ ಅಭ್ಯಾಸಗಳು ಸುಲಭವಾಗಿ ಅಂಟಿಕೊಳ್ಳುತ್ತದೆ. ಆದರೆ ಅದನ್ನು ಬಿಡಬೇಕಾದರೆ ಕಷ್ಟ ಪಡಬೇಕಾಗುತ್ತದೆ. ಕುಡಿತದಿಂದ ಆರೋಗ್ಯ ಹಾಳಾಗುವುದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ ಎಂದು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. 

ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ನಾಗೇಂದ್ರ, ಜಯಾನಂದ ಆರೋಗ್ಯ ಸಹಾಯಕರಾದ ಫಿಲೋಮಿನಾ, ತುಷಾರ, ಆಪ್ತ ಸಮಾಲೋಚಕ ಜಿ.ಆರ್. ಮಧು ಉಪಸ್ಥಿತರಿದ್ದರು. 

ಮುಂದಿನ ವಿಶೇಷ ಶಿಬಿರವು ಜೂ.22 ರಿಂದ ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article