ಆತ್ಮನಿರ್ಭರ್ ನಿಧಿ ಯೋಜನೆಯಡಿ ನಗರ ಮಟ್ಟದ ಲೋಕ ಕಲ್ಯಾಣ ಮೇಳ
ಉಳ್ಳಾಲ ನಗರ ಸಭೆ ಪೌರಾಯುಕ್ತ ಸಂತೋಷ್ ಎಸ್.ಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿರುವಂತಹ ಬಡಜನರ ದುಡಿಮೆಗೆ ಸಹಕಾರವಾಗಲು ಮತ್ತು ಅವರ ಜೀವನ ಸುಧಾರಣೆಯಾಗಲು ಪಿ.ಎಂ ಸ್ವ-ನಿಧಿ ಯೋಜನೆ ಫಲಾನುಭವಿಗಳ ಜೀವನಕ್ಕೆ ಆದಾರವಾಗಿದೆ ಎಂದರು.
ಡೇ ನಲ್ಮ್ ಜಿಲ್ಲಾ ಅಭಿಯಾನದ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಮಾಲೋಚಕ ಲತೇಶ್ ಅವರು ಸಾಮಾಜಿಕ ಭದ್ರತಾ ಯೋಜನೆ ಡಿಜಿಟಲ್ ವ್ಯವಹಾರ ಜನ ಸುರಕ್ಷಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕಿ ಗೀತಾ ಯಶೋಧರ, ಕರ್ನಾಟಕ ಬ್ಯಾಂಕ್ ತೊಕ್ಕೋಟ್ಟು ಶಾಖೆಯ ಮೆನೇಜರ್ ಅಭಿಷೇಕ್ ಕಾಮತ್, ಎಸ್.ಬಿ.ಐ ಬ್ಯಾಂಕ್ ತೊಕ್ಕೋಟ್ಟು ಶಾಖೆಯ ಸಹಾಯಕ ವ್ಯವಸ್ಥಾಪಕ ತೇಜಸ್, ಸ್ವರ್ಣ ಸ್ವ-ಸಹಾಯ ಗುಂಪುಗಳ ನಗರಮಟ್ಟದ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷೆ ಭಾರತಿ.ಎಚ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ನೀಡಲಾಯಿತು.
ಉಳ್ಳಾಲ ನಗರ ಸಭೆ ಸಮುದಾಯ ಸಂಘಟಕ ರೋಹಿನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.