ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ


ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ಜು.30 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ರೋಟರಿ ಕ್ಲಬ್ ಅಂತರಾಷ್ಟ್ರೀಯ ಸಂಘಟನೆಯಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಜೀವನದಲ್ಲಿ ಸೇವಾ ಮನೋಭಾವ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ರೋಟರಿ ಕ್ಲಬ್ ಪುತ್ತೂರು ಸಿಟಿಯ ಯೂತ್ ಸರ್ವಿಸ್ ನ ನಿರ್ದೇಶಕ ರೊಟೇರಿಯನ್ ಪದ್ಮನಾಭ ಶೆಟ್ಟಿ ಮಾತನಾಡಿ, ಸಂಘಟನೆಗಳಲ್ಲಿ ಪಾಲ್ಗೊಳ್ಳುವಿಕೆಯು ಅತಿ ಮುಖ್ಯವಾಗಿದ್ದು, ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಲು ಸಹಕರಿಸುತ್ತದೆ. ರೋಟರಿ ಕ್ಲಬ್‌ನ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಇಂಟರ್ಯಾಕ್ಟ್ ಕ್ಲಬ್, ರೋಟರಿ ಕ್ಲಬ್ ಪುತ್ತೂರು ಸಿಟಿಯ ಚೇರ್ಮನ್ ರೊಟೇರಿಯನ್ ಜೆರೊಮಿಯಾಸ್ ಪಾಯ್ಸ್ ಉಪಸ್ಥಿತರಿದ್ದು, ಎಲ್ಲಾ ಇಂಟರಾಕ್ಟ್ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿಯ ಪದಾಧಿಕಾರಿಗಳು, ಸರ್ವಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂಟರ್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಇಂಟರಾಕ್ಟರ್ ಜಸ್ಮಿತ, ಉಪಾಧ್ಯಕ್ಷರಾಗಿ ಇಂಟರಾಕ್ಟರ್ ಮೊಹಮ್ಮದ್ ಅಫ್ಲಾಲ್ ಫೌಝನ್, ಕಾರ್ಯದರ್ಶಿಯಾಗಿ ಇಂಟರಾಕ್ಟರ್ ದೃತಿ ವಿ, ಜತೆ ಕಾರ್ಯದರ್ಶಿಯಾಗಿ ಇಂಟರಾಕ್ಟರ್ ಮನ್ವಿತಾ ಕೆ, ಕೋಶಾಧಿಕಾರಿಯಾಗಿ ಇಂಟರಾಕ್ಟರ್ ನಿಶಿತಾ, ಸಾರ್ಜಂಟ್ ಆರ್ಮ್ ಇಂಟರಾಕ್ಟರ್

ನಿಧಿಶಾ ಜಿ ಶೆಟ್ಟಿ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ಚಿನ್ಮಯಿ ಆರ್, ಇನ್ಸ್ಟಿಟ್ಯೂಷನಲ್ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ಗ್ರೀಷ್ಮ, ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ನಾಜಿಹ ಪಿ, ಇಂಟರ್ ನ್ಯಾಷನಲ್ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ಸಾನ್ವಿ ಸಿ.ಕೆ. ಅಧಿಕಾರ ಸ್ವೀಕರಿಸಿದರು. ಇಂಟರ್ಯಾಕ್ಟ್  ಕ್ಲಬ್‌ನ ಸಂಯೋಜಕ ಉಪನ್ಯಾಸಕರಾದ ರಾಮ್ ನಾಯ್ಕ್ ಮತ್ತು ಸುಮಾ ಡಿ. ಸಹಕರಿಸಿದರು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ರೊಟೇರಿಯನ್ ಉಮೇಶ್ ಚಂದ್ರ ಡಿ.ವಿ. ಸ್ವಾಗತಿಸಿ, ಮೊಹಮ್ಮದ್ ಅಫ್ಲಾಲ್ ಫೌಝನ್ ವಂದಿಸಿ, ವಿದ್ಯಾರ್ಥಿ ಆಯಿಷಾತ್ ರಝಾನ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article