ಫಿಲೋಮಿನಾ ಕಾಲೇಜಿನಲ್ಲಿ ‘ಯಕ್ಷಾಮೃತ’ ಉದ್ಘಾಟನೆ

ಫಿಲೋಮಿನಾ ಕಾಲೇಜಿನಲ್ಲಿ ‘ಯಕ್ಷಾಮೃತ’ ಉದ್ಘಾಟನೆ


ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ)ನಲ್ಲಿ ಯಕ್ಷಕಲಾಕೇಂದ್ರ ಮತ್ತು ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನ ಸಹಯೋಗದಲ್ಲಿ ‘ಯಕ್ಷಾಮೃತ’ 40 ಗಂಟೆಗಳ ಧೃಡಪತ್ರ ಶಿಕ್ಷಣ ಪಿಜಿ ಸಭಾಂಗಣದಲ್ಲಿ ಉದ್ಘಾಟನೆಗೋಂಡಿತು. 


ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಮತ್ತು ಪ್ರಸರಣದ ಉದ್ದೇಶದಿಂದ ಯಕ್ಷಕಲಾಕೇಂದ್ರವು ಹಲವು ರಚನಾತ್ಮಕ ಕಾರ್ಯಕ್ರಮವನ್ನು ಸಂಯೋಜಿಸಿದೆ.


ಯಕ್ಷಾಮೃತ ಧೃಡಪತ್ರ ಶಿಕ್ಷಣ ವಿದ್ಯಾರ್ಥಿಗಳನ್ನು ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ವೃತ್ತಿಪರ ಪ್ರದರ್ಶನ ನೀಡುವ ಮಟ್ಟದಲ್ಲಿ ತರಬೇತುಗೊಳಿಸುತ್ತದೆ. ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಧೃಡಪತ್ರವನ್ನು ನೀಡಿ ಪ್ರದರ್ಶನ ಸಂಯೋಜಿಸಲಾಗುತ್ತದೆ.


‘ಯಕ್ಷಾಮೃತ’ 2026-27ನ್ನು ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಅವರು ಉದ್ಘಾಟಿಸಿ, ಯಕ್ಷಗಾನ ಪ್ರದರ್ಶನ ಕಲೆಯ ಶೈಕ್ಷಣಿಕ ವಿಸ್ತರತೆಯನ್ನು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೇ. ಡಾ. ಆಂಟನಿ ಪ್ರಕಾಶ್ ಮೋಂತೇರೊ ಮಾತನಾಡಿ, ವಿದ್ಯಾರ್ಥಿಗಳಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿ, ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಕಲಾತ್ಮಕತೆ ಇಲ್ಲವಾಗಿದೆ. ಕಲೆಗಳ ಆಸ್ವಾದನೆಯ ಆಸಕ್ತಿಯು  ಕಡಿಮೆಯಾಗಿದೆ. ಯಕ್ಷ ಕಲಾ ಕೇಂದ್ರವು ನಮ್ಮ ನೆಲದ ಕಲೆಗಳ ಪ್ರಸರಣ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಮತ್ತು ಯಕ್ಷ ಕಲಾ ಕೇಂದ್ರದ ಕಾರ್ಯಗಳಿಗೆ ಸಹಕರಿಸುವಂತೆ ವಿನಂತಿಸಿದರು. 

ಯಕ್ಷ ಕಲಾ ಕೇಂದ್ರ ಸಂಯೋಜಕ ಪ್ರಶಾಂತ್ ರೈ ಸ್ವಾಗತಿಸಿ ಯಕ್ಷಾಮೃತ ಸಂಯೋಜಕಿ ಸುರಕ್ಷಾ ರೈ ವಂದಿಸಿ, ಯಕ್ಷಕಲಾ ಕೇಂದ್ರ ವಿದ್ಯಾರ್ಥಿ ಸನ್ನಿಧಿ ರೈ ಪ್ರಾರ್ಥಿಸಿದರು ಯಕ್ಷಾಮೃತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article